Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ನಯನ ರಂಗಮಂದಿರದಲ್ಲಿ ‘ಕರ್ಣಾಂತರಂಗ’ ಏಕವ್ಯಕ್ತಿ ಪ್ರಸ್ತುತಿ | ಆಗಸ್ಟ್ 02

    August 1, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಸಂಸ ನಾಟಕೋತ್ಸವ’ | ಆಗಸ್ಟ್ 3, 4 ಮತ್ತು 5

    August 1, 2026

    ಕಾರಂತ ಥೀಮ್ ಪಾರ್ಕಿನಲ್ಲಿ ತೆಂಕುತಿಟ್ಟಿನ ಯಕ್ಷಗಾನ ಗೊಂಬೆಯಾಟ ಪ್ರದರ್ಶನ

    August 1, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ರಂಗ ಕಲಾವಿದರಿಗೆ ಸಂತ ಅಲೋಶಿಯಸ್ ಯುನಿವರ್ಸಿಟಿಯಲ್ಲಿ ಎಂ.ಎ. ಕಲಿಯಲು ಅವಕಾಶ
    Drama

    ರಂಗ ಕಲಾವಿದರಿಗೆ ಸಂತ ಅಲೋಶಿಯಸ್ ಯುನಿವರ್ಸಿಟಿಯಲ್ಲಿ ಎಂ.ಎ. ಕಲಿಯಲು ಅವಕಾಶ

    July 31, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಯುನಿವರ್ಸಿಟಿಯಲ್ಲಿ ರಂಗ ಕಲಾವಿದರಿಗೆ ಎಂ.ಎ. ಕಲಿಯಲು ಅವಕಾಶ. ಸಮಯ ಬೆಳಗ್ಗೆ 9-00ರಿಂದ ಮಧ್ಯಾಹ್ನ 12-35 (ಸೋಮವಾರ ಮಾತ್ರ 1-40ರವರೆಗೆ) ನಿಮ್ಮ ರಂಗದ ವೃತ್ತಿ ನಿರ್ವಹಣೆಗೆ ಯಾವ ತೊಂದರೆಯೂ ಆಗುವುದಿಲ್ಲ. ಕೇವಲ ಒಂದೂವರೆ ವರ್ಷ ತರಗತಿಗೆ ಬಂದರಾಯಿತು. ಇದರಲ್ಲಿಯೂ ಎರಡು ಬಾರಿ ಎರಡೆರಡು ತಿಂಗಳ ಮಧ್ಯಂತರ ರಜೆ ಬರುತ್ತದೆ. ಕೊನೆಯ ಆರು ತಿಂಗಳ ವೃತ್ತಿ ತರಬೇತಿ (ಇಂಟರ್ನ್ ಶಿಪ್)ಯನ್ನು ನೀವು ರಂಗ ನಿರ್ವಹಣೆಯಲ್ಲಿದ್ದೇ ನಾಟಕ ಕಲೆ + ತಂಡದ ವೃತ್ತಿ ನಿರ್ವಹಣೆಯಾಗಿ ಕಲಿಯಬಹುದು. ಇದು ವಿಶೇಷವಾದ ಎಂ.ಎ.

    ಈ ಕನ್ನಡ ಎಂ.ಎ. Professional ನ ವಿಶೇಷತೆಗಳು : Digital communication, Small – Big – OTT screen entertainment
    New Media, Translation Industry, Content writing, AI – Prompt Engineering, Script Writing, Stage presentation ಮೊದಲಾದ ಕ್ಷೇತ್ರಗಳಲ್ಲಿ ಕನ್ನಡದ ಉದ್ಯೋಗಕ್ಕೆ ಬೇಕಾದ ತರಬೇತಿಯು ಈ ಎಂ.ಎ. ಸಿಲೆಬಸ್ ನಲ್ಲಿದೆ. ನಿಮ್ಮ ಪ್ರತಿಭೆ, ಅಭಿನಯ ಕಲೆ, ರಂಗವಿನ್ಯಾಸ, ನಿರ್ದೇಶನ ಇತ್ಯಾದಿಗಳನ್ನು ಇಂದಿನ‌ ಡಿಜಿಟಲ್ ಮಾಧ್ಯಮಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಂದಿಡುವುದನ್ನು ನೀವು ಕನ್ನಡದಲ್ಲಿ ಕಲಿಯುತ್ತೀರಿ.

    ಕಾರ್ಪೊರೇಟ್ ಕ್ಷೇತ್ರದಲ್ಲಿ ಡಿಜಿಟಲ್ ಕಮ್ಯುನಿಕೇಶನ್ ಉದ್ಯೋಗಗಳಿಗೆ ಅವಕಾಶವಾಗುತ್ತದೆ. ಕನ್ನಡವನ್ನು Special Paper ಆಗಿ ಆರಿಸಿ IAS ಇತ್ಯಾದಿ Job oriented Examination ಬರೆಯಲು ಈ ಕೋರ್ಸು ಮುಗಿಯುವಾಗ ನೀವು ಪೂರ್ತಿ ತರಬೇತಿ ಪಡೆದಿರುತ್ತೀರಿ. ಲೆಕ್ಚರರ್ ಅಲ್ಲದೆ ಇತರ ಹಲವಾರು ಕ್ಷೇತ್ರಗಳಲ್ಲಿ ಕನ್ನಡದ ಮೂಲಕವೇ ಆಕರ್ಷಕ ಉದ್ಯೋಗ ಪಡೆಯಲು ಇದು ಸಹಾಯಕವಾಗುತ್ತದೆ. ಭಾರತದಲ್ಲಿ ಮೊತ್ತಮೊದಲ ಬಾರಿಗೆ ಹೀಗೆ Professional touch ಇರುವ ಕನ್ನಡ ಎಂ.ಎ. ಕೋರ್ಸನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ನೀನಾಸಂ ಪದವೀಧರರಾದ ಕನ್ನಡ ವಿಭಾಗದ ಅಧ್ಯಾಪಕರು ನಿರಂತರ ರಂಗತರಬೇತಿ ನಾಟಕ ಪ್ರದರ್ಶನಗಳ ಮೂಲಕ ಕ್ಯಾಂಪಸ್ಸಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ವೃತ್ತಿ ಪರಿಣತಿ ನೀಡುತ್ತಿರುತ್ತಾರೆ.

    ಆಧುನಿಕ ರಂಗ ತಿಳುವಳಿಕೆಯು ನಮ್ಮ ಕ್ಯಾಂಪಸ್ಸಿನಲ್ಲಿ ಸಿಗುತ್ತದೆ. Diploma in theatre skills, Certificate course in stage lighting Design ಇತ್ಯಾದಿ ವಿಶೇಷ ತರಬೇತಿಗಳನ್ನು ಈ ಎಂ.ಎ. ಜೊತೆಯಲ್ಲಿ ಹೆಚ್ವಿನದಾಗಿ ನೀವು ಪಡೆಯಬಹುದು. ಕ್ಷೇತ್ರಗಳಲ್ಲಿ ನುರಿತ ತಂತ್ರಜ್ಞರಿಂದ practical class ಗಳ ಜೊತೆ ನಿಮಗಿವು ಲಭ್ಯ. ಲಕ್ಷ ಸಂಖ್ಯೆಯ ಅತ್ಯಂತ ವ್ಯವಸ್ಥಿತ ಲೈಬ್ರೆರಿ ಕರ್ನಾಟಕದಲ್ಲೇ ಅಪೂರ್ವವಾಗಿ ನಮ್ಮಲ್ಲಿದೆ. ನಾಟಕ ಕೃತಿ, ರಂಗ ಇತಿಹಾಸ, ರಂಗದ ತಾಂತ್ರಿಕ ಅಂಶಗಳು, ಚಿತ್ರಕಲೆ, ಸಿನೆಮಾ ಸಾಹಿತ್ಯ, ಕನ್ನಡ, ತುಳು, ಕೊಂಕಣಿ ಸಾಹಿತ್ಯ ಜ್ಞಾನ ಇತ್ಯಾದಿಗಳನ್ನು ಪಡೆಯಲು ಈ ಕೋರ್ಸು ಉಪಯುಕ್ತ. ನಮ್ಮ ವಿದ್ಯಾರ್ಥಿಗಳಿಗಾಗಿ ರೇಡಿಯೋ ಕೇಂದ್ರ, ಸುಸಜ್ಜಿತ ಸ್ಟುಡಿಯೋ ಸೌಕರ್ಯವಿದೆ. ಹತ್ತಕ್ಕೂ ಮಿಕ್ಕಿದ ಅತ್ಯಾಧುನಿಕ ರಂಗಮಂದಿರಗಳಲ್ಲಿ ಆಗುವ ನಿರಂತರ ವೈವಿಧ್ಯ ಚಟುವಟಿಕೆಗಳು ಇನ್ನೊಂದೆಡೆ ಸಿಗಲಾರದ್ದು. ವಿದ್ಯಾರ್ಥಿಗಳಿಗೆ ವೈಯಕ್ತಿಕ ಗಮನವನ್ನು ಕೊಡಲಾಗುತ್ತದೆ.

    ಪೂರ್ತಿಯಾಗಿ ಓದು, ಬರಹ, ಕ್ಲಾಸುಗಳು ಕನ್ನಡದಲ್ಲಿ ಇದ್ದರೂ ಇಂಗ್ಲೀಷಿನ ಬಗ್ಗೆ ಆತ್ಮವಿಶ್ವಾಸ ಬರುವಂತೆ ಅಲೋಶಿಯಸ್ ಯುನಿವರ್ಸಿಟಿಯ ಕ್ಯಾಂಪಸ್ಸಿನಲ್ಲಿ ನೂರಾರು ಚಟುವಟಿಕೆಗಳು ದಿನನಿತ್ಯ ನಡೆಯುತ್ತವೆ. ಲೈಬ್ರೆರಿ, ಲ್ಯಾಬ್, ಅಡಿಟೋರಿಯಂ, ಅಸೋಸಿಯೇಶನ್, ಸ್ಪೋರ್ಟ್ಸ್ – ಹೀಗೆ ತುಂಬ ಸೌಕರ್ಯಗಳಿವೆ. ಅಲೋಶಿಯಸ್ ಡೀಮ್ಡ್ ಯುನಿವರ್ಸಿಟಿ ನೀಡುವ ಎಂ.ಎ. ಪದವಿಗೆ ಜಾಗತಿಕ ಮಾನ್ಯತೆ ಇದೆ. ಈಗಲೇ Apply ಮಾಡಿ, ತರಗತಿಗಳು ಆರಂಭವಾಗಿವೆ. ನೇರ ತರಗತಿಗೆ ನೀವು ಹಾಜರಾಗಬಹುದು ಕೂಡಲೇ ಅರ್ಜಿ ಸಲ್ಲಿಸಿ. ಕೆಲವೇ ದಿನಗಳಲ್ಲಿ ಅಡ್ಮಿಶನ್ ಮುಗಿಯಲಿದೆ. ಪೀಸು ಕಂತಿನಲ್ಲಿ ತುಂಬಬಹುದು. ಪದವಿ ಮುಗಿಸಿ ಕೆಲವು ವರ್ಷ ಅಂತರ ಇದ್ದವರೂ ಸೇರಿಕೊಳ್ಳಬಹುದು. ಯಾವುದೇ ಪದವಿ ಉಳ್ಳ ರಂಗ ಕಲಾವಿದರು ಅರ್ಜಿ ಹಾಕಿ ನೇರ ಅಡ್ಮಿಶನ್ ಮಾಡಿಕೊಳ್ಳಬಹುದು‌. ಯಾವುದೇ ಪದವಿ/ ಅಂತಿಮ ಪದವಿ ವಿದ್ಯಾರ್ಥಿ ಅರ್ಹರು/ಳು ನಿಮ್ಮ ಗಮನಕ್ಕೆ ಬಂದಲ್ಲಿ ದಯವಿಟ್ಟು ಅವರನ್ನು ಕೂಡ ಪ್ರೋತ್ಸಾಹಿಸಿ, ಕಳಿಸಿ. ಮಹಾಲಿಂಗ ಭಟ್ 94496 15469 ಮತ್ತು ಕ್ರಿಸ್ಟೋಫರ್ 91 91132 26234.

    ಎಲ್ಲಾ ಸರಕಾರಿ ಹಾಸ್ಟೆಲ್ ಸ್ಕಾಲರ್ ಶಿಪ್ ಗಳಿಗೆ ನೀವು ಅರ್ಹರು. ಮದ್ಯಾಹ್ನ 2-00 ಗಂಟೆ ಬಳಿಕ ಕಲಾವೃತ್ತಿಯನ್ನು ಯಾವುದೇ ತೊಂದರೆ ಇಲ್ಲದೆ ಮುಂದುವರಿಸಬಹುದು. ಮಂಗಳೂರು ನಗರದ ಮಧ್ಯದಲ್ಲಿರುವ ಅಲೋಶಿಯಸ್ ಯುನಿವರ್ಸಿಟಿಯಿಂದ ನಾಟಕ ಆಗುವಲ್ಲಿಗೆ ತಲುಪಲು ಪ್ರಯಾಣ ಅನುಕೂಲ ತುಂಬ ಚೆನ್ನಾಗಿದೆ. ದಯವಿಟ್ಟು ತಡಮಾಡದೆ ಈಗಿಂದೀಗಲೆ ಅರ್ಜಿ ಹಾಕಿ ಅಥವಾ ಮೇಲಿನ ಅಧ್ಯಾಪಕರಿಗೆ ಕಾಲ್ ಮಾಡಿ ಸೇರಲು ಬನ್ನಿ.

    baikady drama Literature Music roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಸಂಸ್ಕಾರ ಭಾರತೀ ವತಿಯಿಂದ ಹಿರಿಯ ಸಾಧಕರಿಗೆ ಗುರುವಂದನೆ
    Next Article ಉರ್ವಸ್ಟೋರ್ ತುಳುಭವನದಲ್ಲಿ ‘ಬೊಲ್ಪುದ ಪಾಂತೆ’ ತುಳು ಕವನ ಸಂಕಲನ ಲೋಕಾರ್ಪಣೆ | ಆಗಸ್ಟ್ 03
    roovari

    Add Comment Cancel Reply


    Related Posts

    ಬೆಂಗಳೂರಿನ ನಯನ ರಂಗಮಂದಿರದಲ್ಲಿ ‘ಕರ್ಣಾಂತರಂಗ’ ಏಕವ್ಯಕ್ತಿ ಪ್ರಸ್ತುತಿ | ಆಗಸ್ಟ್ 02

    August 1, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಸಂಸ ನಾಟಕೋತ್ಸವ’ | ಆಗಸ್ಟ್ 3, 4 ಮತ್ತು 5

    August 1, 2026

    ಕಾರಂತ ಥೀಮ್ ಪಾರ್ಕಿನಲ್ಲಿ ತೆಂಕುತಿಟ್ಟಿನ ಯಕ್ಷಗಾನ ಗೊಂಬೆಯಾಟ ಪ್ರದರ್ಶನ

    August 1, 2026

    ತುಳು ಸಾಹಿತ್ಯ ಅಕಾಡೆಮಿಯಿಂದ ‘ಮರಿಯಲದ ಮಿನದನ’ | ಆಗಸ್ಟ್ 02

    August 1, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.