ಬೆಳ್ತಂಗಡಿ : ಯುವಕ ಮಂಡಲ (ರಿ.) ಕನಕಮಜಲು, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ (ಕಾವಾ) ಮೈಸೂರು ಆಶ್ರಯದಲ್ಲಿ ನಡೆದ ಸು-ಯೋಗ 2024 ನಿಸರ್ಗ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 08 ಡಿಸೆಂಬರ್ 2024ರಂದು ಮೂರ್ಜೆ ಕನಕಮಜಲು ಇಲ್ಲಿಯ ಶ್ರೀ ಬಾಲ ನಿಲಯದಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಕುಮಾರಿ ಭಾಗೀರಥಿ ಮುರುಳ್ಯ ಇವರು ವಹಿಸಿದರು. ಮುಖ್ಯ ಅಥಿತಿಗಳಾಗಿ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ನರೇಂದ್ರ ರೈ ದೇರ್ಲ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನಿರ್ದೇಶಕ ಪ್ರಸಾದ್ ಕಾಟೂರು, ಕಾರ್ಯಕ್ರಮ ಸಂಯೋಜಕರಾದ ಬಾಲಚಂದ್ರ ನಡಿಲು ಮತ್ತು ಅವಿನ್ ಮಳಿ, ಯುವಕ ಮಂಡಲ ಅಧ್ಯಕ್ಷ ಹರ್ಷಿತ್ ಉಗ್ಗಮೂಲೆ, ಕಾರ್ಯದರ್ಶಿ ಅಶ್ವಥ್ ಅಡ್ಯಾರ್, ಕಾವಾ ಕಾಲೇಜ್ ಮೈಸೂರು ಇದರ ಸಾಂಸ್ಕೃತಿಕ ಕಾರ್ಯದರ್ಶಿ ಸ್ಕಂದ ಭಾರದ್ವಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಎಲ್ಲಾ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಕಾವಾ ಕಾಲೇಜಿನ ಶಿಬಿರಾರ್ಥಿಗಳು, ಊರಿನ ಕಲಾಪ್ರೇಮಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ದಾಮೋದರ ಕಣಜಾಲು ಕಾರ್ಯಕ್ರಮ ನಿರೂಪಿಸಿದರು.