Subscribe to Updates

    Get the latest creative news from FooBar about art, design and business.

    What's Hot

    ಹಾ. ಮ. ಸತೀಶ ಇವರ ‘ಚಿಗರೆ’ ಗಜಲ್ ಸಂಕಲನ ಬಿಡುಗಡೆ | ಅಕ್ಟೋಬರ್ 25

    October 21, 2026

    ಸುಮಿತ್ರಾ ಗೌಡ ಇವರಿಗೆ ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ

    October 21, 2026

    ವಂದನೀಯ ಕ್ಲೆಮೆಂಟ್‌ ಮಸ್ಕರೇನ್ಹಸ್ ಇವರಿಗೆ 22ನೇ ‘ಕಲಾಕಾರ್‌ ಪುರಸ್ಕಾರ’ ಘೋಷಣೆ

    October 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ರಜತ ಕಲಾಯಾನ’ ರಜತ ವರ್ಷ ಸಂಭ್ರಮದ ಸಮಾರೋಪ ಕಾರ್ಯಕ್ರಮ | ಅಕ್ಟೋಬರ್ 23 ಹಾಗೂ 24
    Bharathanatya

    ‘ರಜತ ಕಲಾಯಾನ’ ರಜತ ವರ್ಷ ಸಂಭ್ರಮದ ಸಮಾರೋಪ ಕಾರ್ಯಕ್ರಮ | ಅಕ್ಟೋಬರ್ 23 ಹಾಗೂ 24

    October 21, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ : ಗುರು ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರ ನಿರ್ದೇಶನದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಸಂಸ್ಥೆಯು 25 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಈ ಸಂಭ್ರಮದ ಸಲುವಾಗಿ 2025ನೇ ಅಕ್ಟೋಬರ್ ತಿಂಗಳಿನಲ್ಲಿ ‘ರಜತ ಕಲಾಯಾನ’ ಎಂಬ ಶೀರ್ಷಿಕೆಯೊಂದಿಗೆ ಸರಣಿ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ರಜತ ಕಲಾಯಾನ’ ರಜತ ವರ್ಷ ಸಂಭ್ರಮದ ಸಮಾರೋಪ ಕಾರ್ಯಕ್ರಮವು ದಿನಾಂಕ 23 ಹಾಗೂ 24 ಅಕ್ಟೋಬರ್ 2026ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ.

    ದಿನಾಂಕ 23 ಅಕ್ಟೋಬರ್ 2026ರಂದು ಸಂಜೆ 4-00 ಗಂಟೆಗೆ ಕಾರ್ಯಕ್ರಮವು ಆರಂಭವಾಗಲಿದ್ದು, ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಕಲ್ಚರ್ (ರಿ), ಪುತ್ತೂರು ಇದರ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ನಯನಾ ವಿ. ರೈ ಇವರು ದೀಪ ಪ್ರಜ್ವಲನವನ್ನು ಮಾಡಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ, ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಲಿದೆ. 5-00 ಗಂಟೆಗೆ ಸರಿಯಾಗಿ ಸಭಾಕಾರ್ಯಕ್ರಮವು ನಡೆಯಲಿದ್ದು, ಕಾಸರಗೋಡು ಶ್ರೀ ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಇದರ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳು ಇವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಭಾಗವಹಿಸಲಿದ್ದಾರೆ. ಇದರ ಅಂಗವಾಗಿ ಕಲಾನಿಕೇತನ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಮಹನೀಯರಿಗೆ ಗೌರವಾರ್ಪಣೆ ನಡೆಯಲಿದ್ದು, ಶಿಷ್ಯವೃಂದದವರಿಂದ ಭರತನಾಟ್ಯ ಕಾರ್ಯಕ್ರಮವು ಮುಂದುವರಿಯಲಿದೆ.

    ದಿನಾಂಕ 24 ಅಕ್ಟೋಬರ್ 2026ರಂದು ಸಂಜೆ ಗಂಟೆ 5-30ರಿಂದ ಕಾರ್ಯಕ್ರಮವು ಆರಂಭವಾಗಲಿದ್ದು, ಗೋಮಂತಕ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಶಿರೋಡಾ, ಗೋವಾ ಇಲ್ಲಿನ ಪ್ರಾಂಶುಪಾಲರಾದ ಡಾ. ನೀಲೇಶ್ ಪಿ. ಕೊರ್ಡೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಪ್ರಶಸ್ತಿ ಪುರಸ್ಕೃತರು ಮುಂಬೈಯ ಭರತನಾಟ್ಯ ಕಲಾವಿದರಾದ ಶ್ರೀ ಪವಿತ್ರ ಕೃಷ್ಣ ಭಟ್ ಇವರಿಂದ ಭರತನಾಟ್ಯ ಕಾರ್ಯಕ್ರಮ ‘ನೃತ್ಯಾವಳಿ’ ನಡೆಯಲಿದೆ. ತದನಂತರ ಶ್ರೀ ಶಿಜಿತ್ ನಂಬಿಯಾರ್ ಇವರ ಪರಿಕಲ್ಪನೆ ಹಾಗೂ ನೃತ್ಯ ಸಂಯೋಜನೆಯ ‘ಕಾವ್ಯಂ – ಅಂತರಾಳದ ಕವಿತೆ’ ಎಂಬ ಭರತನಾಟ್ಯ ಕಾರ್ಯಕ್ರಮದ ಪ್ರಸ್ತುತಿಯು ಚೆನ್ನೈಯ ಶ್ರೀಮತಿ ಪಾರ್ವತಿ ಮೆನನ್ ಮತ್ತು ತಂಡದವರಿಂದ ನಡೆಯಲಿದೆ.

    ಕಲಾನಿಕೇತನ ಡ್ಯಾನ್ ಫೌಂಡೇಶನ್ (ರಿ), ಕಲ್ಲಡ್ಕ ಸಂಸ್ಥೆಯು ಕಲ್ಲಡ್ಕ, ಬಿ.ಸಿ.ರೋಡ್, ಬೆಳ್ತಂಗಡಿಗಳಲ್ಲಿ ಭರತನಾಟ್ಯ ತರಗತಿಗಳನ್ನು ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ದೇಶದಾದ್ಯಂತ ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆ ಗಳಿಸಿದೆ. ಈ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ದೂರದರ್ಶನದ ಗ್ರೇಡೆಡ್ ಕಲಾವಿದರಾಗಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಶಿಷ್ಯವೇತನವನ್ನು ಕೂಡ ಪಡೆದಿರುತ್ತಾರೆ. ನೃತ್ಯ ಸಂಸ್ಥೆಯ ಹಲವು ವಿದ್ಯಾರ್ಥಿಗಳು ವಿದ್ವತ್ ಪದವಿಯನ್ನು ಪಡೆದಿದ್ದು, ರಂಗಪ್ರವೇಶ ಕಾರ್ಯಕ್ರಮಗಳನ್ನು ಕೂಡ ನೀಡಿರುತ್ತಾರೆ. ಇದೀಗ 25 ವರ್ಷಗಳ ಸಾರ್ಥಕ ಕಲಾ ಪಯಣವನ್ನು ಪೂರ್ಣಗೊಳಿಸಿ ರಜತ ಸಂಭ್ರಮವನ್ನು ಗುರು ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರ ನಿರ್ದೇಶನದ ಈ ಸಂಸ್ಥೆಯು ಎರಡು ದಿನಗಳ ನೃತ್ಯ ಸಂಜೆಯೊಂದಿಗೆ ಆಚರಿಸುತ್ತಿದೆ.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ‘ಅಮೆರಿಕಥನ’ ಭಿನ್ನ ಶೈಲಿಯ ಪ್ರವಾಸ ಕಥನ
    Next Article ಉಡುಪಿ ರಾಜಾಂಗಣದಲ್ಲಿ ‘ನೃತ್ಯಾಂಜಲಿ’ ಭರತನಾಟ್ಯ ಪ್ರದರ್ಶನ | ಅಕ್ಟೋಬರ್ 21
    roovari

    Add Comment Cancel Reply


    Related Posts

    ಹಾ. ಮ. ಸತೀಶ ಇವರ ‘ಚಿಗರೆ’ ಗಜಲ್ ಸಂಕಲನ ಬಿಡುಗಡೆ | ಅಕ್ಟೋಬರ್ 25

    October 21, 2026

    ಸುಮಿತ್ರಾ ಗೌಡ ಇವರಿಗೆ ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ

    October 21, 2026

    ವಂದನೀಯ ಕ್ಲೆಮೆಂಟ್‌ ಮಸ್ಕರೇನ್ಹಸ್ ಇವರಿಗೆ 22ನೇ ‘ಕಲಾಕಾರ್‌ ಪುರಸ್ಕಾರ’ ಘೋಷಣೆ

    October 21, 2026

    ಕೂಚಿಪುಡಿ ನಾಟ್ಯ ಪರಂಪರ ಹದಿಮೂರನೆಯ ನೃತ್ಯೋತ್ಸವ -2026 | ಅಕ್ಟೋಬರ್ 29

    October 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.