ಮಂಗಳೂರು : ನೃತ್ಯಾಂಗನ್ ಸಂಸ್ಥೆಯ ವತಿಯಿಂದ ‘ಯುವ ನೃತ್ಯೋತ್ಸವ’ 2026 ಕಾರ್ಯಕ್ರಮವನ್ನು ಡಾ. ಅರುಣ್ ಕುಮಾರ್ ಮೈಯ ಇವರ ಸ್ಮರಣಾರ್ಥವಾಗಿ ದಿನಾಂಕ 14 ಜೂನ್ 2026ರಂದು ಸಾಯಂಕಾಲ 5-30 ಗಂಟೆಗೆ ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಚೆನ್ನೈಯ ಭರತನಾಟ್ಯ ಕಲಾವಿದೆ ಶ್ರೀಮತಿ ಉಮಾ ಸತ್ಯನಾರಾಯಣನ್ ಇವರು ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಲಿಸಲಿದ್ದಾರೆ. ವಿದ್ವಾನ್ ಪಿ. ಪ್ರವೀಣ್ ಕುಮಾರ್ ಇವರ ಶಿಷ್ಯೆ ಅರ್ಚನಾ ಜೋಯಿಸ್ ಬೆಂಗಳೂರು, ವಿದುಷಿ ಎಂ. ಲಕ್ಷ್ಮೀ ಪ್ರಿಯ ರಾಜ ಇವರ ಶಿಷ್ಯೆ ಕ್ಷಿತಿಕಾ ಪಿ. ನಾಯರ್ ಚೆನ್ನೈ, ವಿದುಷಿ ಸಂಧ್ಯಾ ಶಂಕರ್ ಇವರ ಶಿಷ್ಯೆ ಶಕ್ತಿ ಪ್ರಿಯ ವಿ.ಡಿ. ತಿರುಪ್ಪುರ್ ಮತ್ತು ವಿದುಷಿ ರಾಧಿಕಾ ಶೆಟ್ಟಿಯ ಇವರ ಶಿಷ್ಯೆ ಶಾಮ ಜಗದೀಶ್ ಎಚ್. ಮಂಗಳೂರು ಇವರು ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.

