ಮಂಗಳೂರು : ಸೌಹಾರ್ದ ಸಾಹಿತ್ಯ ವೇದಿಕೆ ಹುಬ್ಬಳ್ಳಿ ಇದರ ಮಂಗಳೂರು ಘಟಕದ ವತಿಯಿಂದ ಮಂಗಳೂರಿನ ಕವಿ ಮನದವರಿಗೆ ‘ಕನ್ನಡದ ಕಂಪು ಸರಣಿ -10’ ಮಾಲಿಕೆಯ ಅಡಿಯಲ್ಲಿ ಸಂತ ಶಿಶುನಾಳ ಶರೀಫ ಸಾಹೇಬರ ಕುರಿತು ವಾಚನ ಮತ್ತು ವಿಚಾರ ಸಂಕಿರಣವನ್ನು ದಿನಾಂಕ 07 ಜೂನ್ 2026ರಂದು ಸಂಜೆ 3-00 ಗಂಟೆಗೆ ಮಂಗಳೂರಿನ ಲಾಲ್ ಭಾಗ್ ಹತ್ತಿರ ಪಬ್ಬಾಸ್ ಎದುರುಗಡೆ ಇರುವ ಪ್ರಿಯದರ್ಶಿನಿ ಪಾರ್ಕ್ ಇಲ್ಲಿ ಆಯೋಜಿಲಾಗಿದೆ.
ಈ ದಿನ ನಡೆಯಲಿರುವ ಕವಿಗೋಷ್ಠಿಯಲ್ಲಿ ಭಾಗವಹಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿರಿ. 9448791004 ಮತ್ತು 7259586907.

