ಮಂಗಳೂರು : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 291ನೇ ಕಾರ್ಯಕ್ರಮ ರೊಬಿನ್ ಸಿಕ್ವೇರಾ ಲೈವ್ ದಿನಾಂಕ 01 ಮಾರ್ಚ್ 2026ರಂದು ಸಂಜೆ 6-30 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು.
ಮೊದಲಿಗೆ ಹಿರಿಯ ಸಾಹಿತಿ ಹೇಮಾಚಾರ್ಯ ಬರೆದು, ಉಜ್ವಲ್ ಪ್ರಕಾಶನ ಪ್ರಕಟಿಸಿದ ಆಮ್ಚಿ ಮಾತಿ ಆಮ್ಚಿಂ ಮನ್ಶಾಂ (ನಮ್ಮ ಮಣ್ಣಿನ ಮಹನೀಯರು) ಪುಸ್ತಕವನ್ನು ಹಿರಿಯ ಗಾಯಕಿ ಜೊಯ್ಸ್ ಒಝೇರಿಯೊ ಬಿಡುಗಡೆಗೊಳಿಸಿದರು. ದಾಯ್ಜಿವರ್ಲ್ಡ್ ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೊಕಿಂ ಸ್ಟ್ಯಾನಿ ಆಲ್ವಾರಿಸ್, ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೊಯ್ ಕ್ಯಾಸ್ತೆಲಿನೊ, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಹಾಗೂ ಇಯಾನ್ ಕೇರ್ ಫೌಂಡೇಶನ್ ಟ್ರಸ್ಟಿ ಇನಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ಹಾಸ್ಯ ನಟ ರಿಚಾರ್ಡ್ ಸಿಕ್ವೇರಾ ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಹಾಜರಿದ್ದರು. ಅರುಣ್ ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ಯುವ ಗಾಯಕ, ಸೋದ್ – 4 ಹಾಗೂ ಗಲ್ಫ್ ವಾಯ್ಸ್ ಅಫ್ ಮಂಗಳೂರು ಗಾಯನ ರಿಯಾಲಿಟಿಗಳ ವಿಜೇತ ಹಾಗೂ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರದ ಶ್ರೇಷ್ಟ ಗಾಯಕ ಪುರಸ್ಕಾರವನ್ನು ಎರಡು ಬಾರಿ ಪಡೆದ ರೊಬಿನ್ ಸಿಕ್ವೇರಾ ಸಂಗೀತ ರಸಮಂಜರಿ ನಡೆಸಿಕೊಟ್ಟರು. ಎರಿಕ್ ಒಝೇರಿಯೊ ಅವರಿಂದ ಪ್ರೇರಣೆ ಪಡೆದು ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಕಲಾವಿದರು ಸೇರಿ ಅವರ ಸ್ಮರಣಾರ್ಥ ಈ ಸಂಜೆಯನ್ನು ವಿಶಿಷ್ಟವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಮೆಲ್ವಿನ್ ಫೆರ್ನಾಂಡಿಸ್, ರಾಜ್ ಗೋಪಾಲ್ ಮತ್ತು ರೋಶನ್ ಡಿಸೋಜ ಇವರನ್ನು ಭಾಷಾ ಪ್ರೇಮಿ ಐವನ್ ಪಿಂಟೊ ಕದ್ರಿ ಗೌರವಿಸಿದರು.
ಆನ್ಸೆಲ್ ಡಿ’ಕೋಸ್ತಾ, ಡ್ಯೂಕ್ ರೊಡ್ರಿಗಸ್, ಈವಾ ಪಿರೇರಾ, ಜೇಡನ್ ಪಿಂಟೊ, ಕೇಟ್ ಪಿರೇರಾ, ರೇ ಕ್ಲಿಯೊನ್ ಸಿಕ್ವೇರಾ, ಲೂಕ್ ಡಿ’ಸೋಜ, ರಿಯೊನ್ ಪಿಂಟೊ, ಶಾನ್ ದೇವಾಡಿಗ, ಶೊನ್ ಡಿ’ಸೋಜ ಈ ಹತ್ತು ಜನ ಮಕ್ಕಳು ತಮ್ಮ ಹಾಡುವ, ಸಂಗೀತ ನೀಡುವ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಸಂಗೀತ ನೀಡಿದರು. ಝೀನಾ ಪಿರೇರಾ, ಪ್ರಕಾಶ್ ಡಿ’ಸೋಜ, ಕ್ಯಾರಲ್ ಸಿಕ್ವೇರಾ, ಮೀರಾ ಕ್ರಾಸ್ತಾ ಹಾಡುಗಳಿಗೆ ದನಿಗೂಡಿಸಿದರು. ಡೆರಿಕ್ ಡಿ’ಸೋಜ, ಐವನ್ ಪಿರೇರಾ, ರಾಜ್ ಗೋಪಾಲ್, ರೋಶನ್ ಡಿ’ಸೋಜ, ಸ್ಟೀಫನ್ ಫ್ರ್ಯಾಂಕ್, ವೀಕ್ಷಿತ್ ಮತ್ತು ವಿಜಯ್ ರಸ್ಕಿನ್ಹಾ ಸಂಗೀತದಲ್ಲಿ ಹಾಗೂ ಅರ್ಬನ್ ಗ್ರೂವ್ ತಂಡವು ನೃತ್ಯದಲ್ಲಿ ಸಹಕರಿಸಿದರು. ಕವಿ ಲೊಯ್ಡ್ ರೇಗೊ ಸುಸೂತ್ರವಾಗಿ ಕಾವ್ಯಮಯ ಶೈಲಿಯಲ್ಲಿ ನಿರೂಪಿಸಿದರು.
