ಕೋಲಾರ : ಆದಿಮ ಸಾಂಸ್ಕೃತಿಕ ಕೇಂದ್ರ ಶಿವಗಂಗೆ, ತೇರಹಳ್ಳಿ ಬೆಟ್ಟ, ಕೋಲಾರ ಇದರ ವತಿಯಿಂದ ‘ಹುಣ್ಣಿಮೆ ಹಾಡು 227’ ಕಾರ್ಯಕ್ರಮವನ್ನು ದಿನಾಂಕ 03 ಮಾರ್ಚ್ 2026ರಂದು ಸಂಜೆ 7-00 ಗಂಟೆಗೆ ಆದಿಮದಲ್ಲಿ ಆಯೋಜಿಸಲಾಗಿದೆ.
ಆದಿಮ ರಂಗಭೂಮಿ ಶಿಕ್ಷಣ ಕೇಂದ್ರದ 2025-26ನೇ ಸಾಲಿನ ‘ಡಿಪ್ಲೋಮಾ ಇನ್ ಡ್ರಾಮಾ’ ವಿದ್ಯಾರ್ಥಿಗಳು ಮತ್ತು ಆದಿಮ ರಂಗತಂಡ ‘ಮರೆತದಾರಿ’ ನಾಟಕವನ್ನು ಪ್ರಸ್ತುತಿ ಪಡಿಸಲಿದ್ದಾರೆ. ಈ ನಾಟಕದ ರಚನೆ : ಲಕ್ಷ್ಮೀಪತಿ ಕೋಲಾರ, ನಿರ್ದೇಶನ : ಪ್ರದೀಪ್ ತಿಪಟೂರು, ವಸ್ತ್ರವಿನ್ಯಾಸ : ಸುಗುಣ ನಾಗ್, ಪರಿಕರ ಮತ್ತು ರಂಗಸಜ್ಜಿಕೆ : ಮನೋಜ್ ಕುಮಾರ್ ಮತ್ತು ಕೆ.ವಿ. ನಾಯಕ, ಸಂಗೀತ : ಜಗದೀಶ್ ಆರ್. ಜಾಣಿ, ಎಂ. ಹರೀಷ ಕುಮಾರ, ಸುನೀಲ್ ಬೆನಫಟ್ಟ ಮತ್ತು ಗ.ನ. ಅಶ್ವತ್ಥ್ ಹಾಗೂ ಬೆಳಕಿನ ವಿನ್ಯಾಸ : ತುರಾಂಡ ಹಳ್ಳಿ ಶ್ರೀನಿವಾಸ್ ಇವರದ್ದು.

