ಉಡುಪಿ : ಕೀರ್ತಿಶೇಷ ಅಂಬಾತನಯ ಮುದ್ರಾಡಿ ಅವರ ಸ್ಮರಣಾರ್ಥ ಉಡುಪಿ ರಂಗಭೂಮಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ನೀಡಲಾಗುವ 2026ನೇ ಸಾಲಿನ ಪುಸ್ತಕ ಪ್ರಶಸ್ತಿಗಾಗಿ ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ.
ಆದರ್ಶ ಅಧ್ಯಾಪಕ, ಕವಿ, ಯಕ್ಷಗಾನ ಕಲಾವಿದ ಹಾಗೂ ತಾಳಮದ್ದಳೆ ಅರ್ಥಧಾರಿಯಾಗಿದ್ದ ಅಂಬಾತನಯ ಮುದ್ರಾಡಿ ಇವರ ಹೆಸರಿನಲ್ಲಿ ಕಳೆದ ಎರಡು ವರ್ಷಗಳಿಂದ ಈ ಗೌರವವನ್ನು ನೀಡಲಾಗುತ್ತಿದ್ದು, ಪ್ರಶಸ್ತಿಯು ಹದಿನೈದು ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ರಂಗಭೂಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
2024, 2025ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡಿರುವ ನಾಟಕರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗುತ್ತಿದೆ. ಆಸಕ್ತ ಲೇಖಕರು, ಪ್ರಕಾಶಕರು ಅಥವಾ ರಂಗಕರ್ಮಿಗಳು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ದಿನಾಂಕ 30 ಏಪ್ರಿಲ್ 2026ರ ಒಳಗಾಗಿ ಸ್ಪರ್ಧೆಯ ಸಂಚಾಲಕರಾದ ಬೆಳಗೋಡು ರಮೇಶ ಭಟ್, ‘ದಕ್ಷಿಣ ಕಾಶಿ’ (ಡಿ-1), ಎರಡನೆಯ ಮುಖ್ಯರಸ್ತೆ, ವಾಣಿ ವಿಲಾಸ್ ಮೊಹಲ್ಲಾ, ಮೈಸೂರು- 570002 (ಮೊಬೈಲ್: 9341091821) ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಬೇಕು.
