ತುಮಕೂರು : ದೂರದರ್ಶನ ಶ್ರೇಣಿಯ ಕಲಾವಿದರಾಗಿರುವ ಸುಷ್ಮಾ ಪ್ರಸಾದ್ ಇವರ ರಸಧಾರ ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆಯು ತನ್ನ ಪ್ರಥಮ ವರ್ಷದ ಭರತನಾಟ್ಯ ವಾರ್ಷಿಕ ಉತ್ಸವ ‘ಆರೋಹಣ’ವನ್ನು ದಿನಾಂಕ 11 ಮತ್ತು 12 ಜುಲೈ 2026ರಂದು ತುಮಕೂರಿನ ಮಹಿಳಾ ಸಮಾಜ ಜ್ಞಾನಧಾರ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಇದರ ಅಂಗವಾಗಿ ದಿನಾಂಕ 11 ಜುಲೈ 2026ರಂದು ನೃತ್ಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಮತ್ತು ಮುಖ್ಯವಾಗಿ ಕರಾವಳಿಯ ನೃತ್ಯ ವಿದ್ವಾಂಸರಾದ ಮಂಜುನಾಥ್ ಎನ್. ಪುತ್ತೂರು ಇವರು ನಿಯಮಬದ್ಧ ಮತ್ತು ಲೆಕ್ಕಾಚಾರಬದ್ಧವಾಗಿ ರೂಪಿಸಿರುವ ‘ಜಗದ್ ಗುರು ತಾಳ’ ಹೊಸ ತಾಳವೊಂದು ಲೋಕಾರ್ಪಣೆಗೊಳ್ಳಲಿದೆ. ದಿನಾಂಕ 12 ಜುಲೈ 2026ರಂದು ಮಂಜುನಾಥ್ ಎನ್. ಪುತ್ತೂರು ಇವರಿಂದ ನೃತ್ಯ ಕಾರ್ಯಾಗಾರವನ್ನು ಸಂಸ್ಥೆಯು ಲಿಕಿತ್ ಅರ್ಕಡ್ ನಲ್ಲಿರುವ ರಸಧಾರ ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದೆ.

