Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

    October 17, 2026

    ಶಿವಮೊಗ್ಗದಲ್ಲಿ ಸಾಂಸ್ಕೃತಿಕ ದಸರಾ ಕವಿ ಕಾವ್ಯ ಸಂಭ್ರಮ | ಅಕ್ಟೋಬರ್ 19

    October 17, 2026

    ಮಡಿಕೇರಿ ಗಾಂಧಿ ಮೈದಾನದಲ್ಲಿ ‘ಜಾನಪದ ದಸರಾ -2026’ | ಅಕ್ಟೋಬರ್ 18

    October 17, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪರಿಚಯ ಲೇಖನ | ‘ಸ್ವರ ಸಿರಿ’ ಅಖಿಲಾ ಪಜಿಮಣ್ಣು
    Article

    ಪರಿಚಯ ಲೇಖನ | ‘ಸ್ವರ ಸಿರಿ’ ಅಖಿಲಾ ಪಜಿಮಣ್ಣು

    October 17, 2026No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಇವರ ಹುಟ್ಟೂರು. ಕನ್ನಡದ ಪ್ರಖ್ಯಾತ ಸಂಗೀತ ಶೋ ಜೀ ಕನ್ನಡ ಸ ರಿ ಗ ಮ ಪ ಲಿಟಲ್ ಚಾಂಪ್ಸ್ (8) ವಿಜೇತೆ, ಕಲರ್ಸ್ ಕನ್ನಡ ಕನ್ನಡದ ಕೋಗಿಲೆ (1) ಹಾಗೂ ಕನ್ನಡದ ಕೋಗಿಲೆ ಸೂಪರ್ ಸೀಸನ್ (2020) ಪ್ರಥಮ ರನ್ನರ್ ಅಪ್ ಹಾಗೂ ಜೀ ಕನ್ನಡ ಸ ರಿ ಗ ಮ ಪ ಚಾಂಪಿಯನ್ ಶಿಪ್ ನಲ್ಲಿ ಇಂದು ನಾಗರಾಜ್ ಅವರ ತಂಡವನ್ನು ಪ್ರತಿನಿಧಿಸಿದ್ದಾರೆ. ಕಲರ್ಸ್ ಕನ್ನಡದ ಮುಂಜಾನೆ ರಾಗ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿರುತ್ತಾರೆ. ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸಂಕಲ್ಪ ಅಮೃತಘಳಿಗೆ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾ ಸಂಗೀತ ಕ್ಷೇತ್ರ ಹಾಗೂ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿರುವ ಕಲಾವಿದೆ ಅಖಿಲಾ ಪಜಿಮಣ್ಣು.

    ಉದಯ್ ಕುಮಾರ ಹಾಗೂ ಉಷಾ ಉದಯ್ ಇವರ ಮಗಳಾಗಿ ಜನನ. ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ನಲ್ಲಿ ಎಂ.ಬಿ.ಎ. ಪದವಿ ಪಡೆದಿರುತ್ತಾರೆ. ಶ್ರೀಮತಿ ರಾಜೇಶ್ವರಿ ಕಣ್ಣಾರಾಯ ಅವರ ಬಳಿ ತಮ್ಮ ಐದನೇ ವಯಸ್ಸಿನಲ್ಲಿ ಸಂಗೀತ ಕಲಿಯಲು ಆರಂಭಿಸಿ ಪ್ರಸ್ತುತ ವಿದ್ವಾನ್ ಶ್ರೀ ರಾಹುಲ್ ಕೆ. ರವೀಂದ್ರನ್ ಇವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ವಿಜಯ ಪ್ರಕಾಶ್, ಅರ್ಜುನ್ ಜನ್ಯ, ನವೀನ್ ಸಜ್ಜು, ಎಂ.ಡಿ. ಪಲ್ಲವಿ, ಘಟಂ ಗಿರಿಧರ ಉಡುಪ ಹಾಗೂ ಅನೇಕ ಕನ್ನಡದ ಸಂಗೀತ ದಿಗ್ಗಜರ ಜೊತೆಗೆ ಸೇರಿ ಈವರೆಗೆ 500ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನೀಡಿರುತ್ತಾರೆ.

    ಸರಿಗಮಪ ಲಿಟಲ್ ಚಾಂಪ್ಸ್ ಹಾಗೂ ಕನ್ನಡ ಕೋಗಿಲೆಯ ಕಾರ್ಯಕ್ರಮದ ಅನುಭವ ಹಾಗೂ ಜಡ್ಜಸ್ ಬಗ್ಗೆ ಅಭಿಪ್ರಾಯ:-
    ಸರಿಗಮಪ ಲಿಟಲ್ ಚಾಂಪ್ಸ್ -10ರ ಆಡಿಷನ್ ಸಮಯದಲ್ಲಿ ನಾನು 8ನೇ ತರಗತಿಯಲ್ಲಿದ್ದೆ. ರಿಯಾಲಿಟಿ ಶೋ ಬಗ್ಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ. ನನ್ನ ಅಜ್ಜ (ಅಮ್ಮನ ಅಪ್ಪ) ಎಕ್ಸ್ ಮಿಲಿಟರಿ ಆಗಿದ್ದರು. ಹೀಗೆಯೇ ನನ್ನ ಅಜ್ಜ ಕರೆದುಕೊಂಡು ಹೋದರು. ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ಆಡಿಷನ್ ಗೆ ಹೋಗಿದ್ದೆ. ಪ್ರವೀಣ್ ಬಿ. ರಾವ್ ಸೆಲೆಕ್ಷನ್ ಗೆ ಇದ್ದರು. ಭಾವಗೀತೆ ಹಾಡಿ ಬಂದಿದ್ದೆ. ನಮ್ಮ ಮನೆಯಲ್ಲಿ ಆಗ ಲ್ಯಾಂಡ್ ಫೋನ್ ಮಾತ್ರ ಇತ್ತು. ಒಂದು ದಿನ ಕಾಲ್ ಬಂತು ಬೆಂಗಳೂರಿಗೆ ಬನ್ನಿ ಅಂತ. ಅಪ್ಪ ಕರೆದುಕೊಂಡು ಹೋದ್ರು. ಎಂ.ಡಿ. ಪಲ್ಲವಿ ಮೇಡಮ್, ರಘು ದೀಕ್ಷಿತ್ ಸರ್, ಗುರುಕಿರಣ್ ಸರ್ ಸೆಲೆಕ್ಷನ್ ಗು ಅವರೇ ಇದ್ರು, ಜಡ್ಜಸ್ ಆಗಿಯೂ ಅವರೇ ಇದ್ರು. ನಾನು ನನ್ನಷ್ಟಕ್ಕೆ ಪದ್ಯ ಹಾಡಿ ಬಂದಿದ್ದೆ. ಬೆಳಿಗ್ಗೆ 10 ಗಂಟೆಗೆ ನನ್ನ ಹಾಡು ಆಗಿತ್ತು. ರಾತ್ರಿ 10 ಗಂಟೆ ಆಗುವಾಗ ಆಡಿಷನ್ ರಿಸಲ್ಟ್ ಹೇಳಿದ್ರು. ಎಂ.ಡಿ. ಪಲ್ಲವಿ ಮೇಡಮ್ ಅವರೇ ನನ್ನ ಹೆಸರು ಕರೆದು ಹೇಳಿದರು. ಫಿನಾಲೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಆಗಿತ್ತು. ಫಿನಾಲೆಗೆ ಉಷಾ ಉತ್ತುಪ್ ಮೇಡಂ ಬಂದಿದ್ರು. ಅವರಿಗೂ ನನಗೂ ಏನೋ ಒಂದು ಬಾಂಧವ್ಯ ಇದ್ದ ಹಾಗೆ, ಅವರೇ ನನ್ನ ಹೆಸರನ್ನು ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಎಂದು ಘೋಷಿಸಿದ್ರು. ಹಾಗೂ ಅವರೇ ಕನ್ನಡ ಕೋಗಿಲೆಯ ವಿನ್ನರ್ ಎಂದು ನನ್ನ ಹೆಸರನ್ನು ಘೋಷಿಸಿದ್ರು.

    ಕನ್ನಡ ಕೋಗಿಲೆಯ ಜಡ್ಜಸ್ ಆದ ಸಾಧು ಕೋಕಿಲ, ಅರ್ಚನಾ ಉಡುಪ, ಚಂದನ್ ಶೆಟ್ಟಿ, ಮೆಗಾ ಆಡಿಷನ್ ಗೆ ಉಷಾ ಉತ್ತುಪ್ ಅವರು ಇದ್ದರು. ಕನ್ನಡ ಕೋಗಿಲೆಯ ಆಡಿಷನ್ ಅಲ್ಲಿ 30 ಸಾವಿರ ಅಭ್ಯರ್ಥಿಗಳಿದ್ದರು. ಅದರಲ್ಲಿ 30 ಜನರನ್ನು ಸೆಲೆಕ್ಟ್ ಮಾಡಿದ್ರು. 20 ಅಭ್ಯರ್ಥಿಗಳಲ್ಲಿ ನನ್ನ ಹಾಡಿಗೆ ಮಾತ್ರ ಒನ್ ಮೋರ್ ಅಂತ ಹಾಡಿಸಿದರು. ನನ್ನನ್ನೇ ಆನ್ ಸ್ಪಾಟ್ ಸೆಲೆಕ್ಟ್ ಮಾಡಿದ್ರು. ಕನ್ನಡ ಕೋಗಿಲೆ ಸೂಪರ್ ಸೀಸನ್ ನಲ್ಲಿ ನಾನು ಹಾಡಿದ ಹಾಡು ತುಂಬ ಖುಷಿಯಾಗಿ ಅರ್ಚನಾ ಉಡುಪ ಮೇಡಂ ಅವರು ಧರಿಸಿದ್ದ ಉಂಗುರವನ್ನೇ ನನ್ನ ಕೈಗೆ ಹಾಕಿದರು. ಸ್ಪರ್ಧೆಯ ಹಾಡನ್ನು ಹಾಡಿದ ನಂತರ ಸಾಧು ಕೋಕಿಲ ಸರ್, ಅರ್ಚನಾ ಉಡುಪ ಮೇಡಂ, ಚಂದನ್ ಶೆಟ್ಟಿ ಸರ್ ಅವರು ಇನ್ನೂ ಬೇರೆ ಕ್ಲಾಸಿಕಲ್ ಅಥವಾ ಕರ್ನಾಟಿಕ್ ಹಾಡುಗಳನ್ನು ಹಾಡಿ ಎಂದು ಹಾಡಿಸಿ ತುಂಬಾ ಹುರಿದುಂಬಿಸುತ್ತಿದ್ದರು. ಕನ್ನಡ ರಿಯಾಲಿಟಿ ಶೋ ಅಲ್ಲಿ 1st ಆಗಿರಬಹುದು. ಕರ್ನಾಟಿಕ್ ಕ್ಲಾಸಿಕಲ್ ನಾ ಒಂದು ವರ್ಣನ್ ಹಾಡಿದ್ದು ನಾನೇ ಆಗಿರಬೇಕು, “ಮಾತೆ ವಲಯಜೆ” ಪದ್ಯ ಹಾಡಿದ್ದು. ಬೇರೆ ಬೇರೆ ಹಾಡುಗಳನ್ನು ಹಾಡಲು ಚಾನೆಲ್ ನನಗೆ ಅವಕಾಶ ಕೊಟ್ಟಿದೆ. ಅದಕ್ಕೆ ಥ್ಯಾಂಕ್ಸ್ ಹೇಳಲು ಇಷ್ಟ ಪಡ್ತೇನೆ…..

    ಸಂಗೀತ ಕ್ಷೇತ್ರದ ಇಂದಿನ ಸ್ಥಿತಿ ಗತಿ ಮತ್ತು ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
    ಈಗ ಜನರಿಗೆ ತುಂಬಾ ಚೇಂಜ್ ಬೇಕು. ಒಂದೇ ರೀತಿಯಲ್ಲಿಯೇ ಹಾಡಿದರೆ ಜನರಿಗೆ ಇಷ್ಟ ಆಗೋದಿಲ್ಲ.. ನನಗೆ ಬೇರೆ ಬೇರೆ ರೀತಿಯ ಎಲ್ಲಾ ಹಾಡು ಹಾಡಲು ಇಷ್ಟ.. ಕರ್ನಾಟಿಕ್ ಮ್ಯೂಸಿಕ್ ಅನ್ನೇ ಫ್ಯೂಷನ್ ತರಹ ಹಾಡಲು ಇಷ್ಟ. ದೇವರ ನಾಮವನ್ನೇ ಡಿಫರೆಂಟ್ ಆಗಿ ಫ್ಯೂಷನ್ ತರಹ ಹಾಡುವುದು ಇಷ್ಟ. ಕೇರಳ, ತಮಿಳುನಾಡಿನಲ್ಲಿ ಹಾಗೆ ಹಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಕಡಿಮೆ, ಕರ್ನಾಟಕದಲ್ಲಿ ಅಂತಹ ಹಾಡುಗಳನ್ನು ತರಬೇಕು ಎಂದು ಆಸೆ ಇದೆ…

    ಕಾರ್ಯಕ್ರಮ ನೀಡುವಾಗ ಮಾಡಿಕೊಳ್ಳುವ ಅಧ್ಯಯನ, ಸಿದ್ಧತೆಗಳೇನು?:-
    ಪ್ರತಿಯೊಂದು ಕಾರ್ಯಕ್ರಮಕ್ಕೂ ತಯಾರಿ ಮಾಡಿಕೊಳ್ಳುತ್ತೇನೆ. ಭಕ್ತಿ ಸಂಬಂಧಿತ ಕಾರ್ಯಕ್ರಮಗಳಿಗೆ ಭಕ್ತಿಗೀತೆಗಳು, ಪಬ್ಲಿಕ್ ಕಾರ್ಯಕ್ರಮಗಳಿಗೆ ಬೇರೆಯೇ ಹಾಡುಗಳು… ಹೀಗೆ ಅಭ್ಯಾಸ ಮಾಡಿಕೊಂಡು ಹೋಗುತ್ತೇನೆ.

    ವಾಯ್ಸ್ ವಾರ್ಮ್ ಅಪ್ ಮಾಡಿಕೊಂಡೆ ಸ್ಟೇಜಿಗೆ ಬರುತ್ತೇನೆ. ಪ್ರತಿ ಕಾರ್ಯಕ್ರಮದ ದಿನ ಪದ್ಯ ಹಾಡಿಕೊಂಡು ಅಭ್ಯಾಸ ಮಾಡಿಕೊಂಡ ನಂತರವೇ ಕಾರ್ಯಕ್ರಮ ನೀಡುತ್ತೇನೆ….

    ನಿಮ್ಮ ಕಲಾಯಾನದಲ್ಲಿ ಸ್ಪೂರ್ತಿ ನೀಡಿದ ಕಲಾವಿದರು ಯಾರು?:
    ಸ್ಪೂರ್ತಿ – ವಿಜಯ್ ಪ್ರಕಾಶ್ ಸರ್ ಅವರೇ ಸ್ಪೂರ್ತಿ.
    ಅವರ ಹಾಡುಗಳು ತುಂಬ ಇಷ್ಟ. ತುಂಬಾ ಹಂಬಲ್ ವ್ಯಕ್ತಿ. ಡೌನ್ ಟು ಅರ್ಥ್ ವ್ಯಕ್ತಿ. ಅವರು ಇತರ ಕಲಾವಿದರಿಗೆ ಗೌರವ ಕೊಡುವಂತದ್ದು, ಪ್ರೀತಿಯಿಂದ ಮಾತಾಡುವಂತದ್ದು ತುಂಬ ಇಷ್ಟ….
    ಹಾಗಾಗಿ ನನಗೆ ಅವರೇ ಪ್ರೇರಣೆ….

    ಸಂಗೀತ ಕ್ಷೇತ್ರಕ್ಕೆ ಬರುವ ಯುವ ಕಲಾವಿದರಿಗೆ ನಿಮ್ಮ ಕಿವಿಮಾತು ಏನು?:
    ತಯಾರಿ, ಪ್ರಾಕ್ಟಿಸ್ ಮಾಡಲೇಬೇಕು.. ನನಗೆ ಬರ್ತದೆ ಹಾಡಲು ಅಂತ ಹಾಡಲು ಹೋಗುವುದು ಅಲ್ಲ.. ನಿರಂತರ ಅಭ್ಯಾಸ ಮಾಡಿಕೊಂಡು, ಸಂಗೀತ ಜ್ಞಾನವನ್ನು ತಿಳಿದುಕೊಂಡು ಕಾರ್ಯಕ್ರಮಗಳಿಗೆ ಹಾಡಲು ಹೋಗಬೇಕು.

    ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತಕ್ಕೆ ಇರುವ ವ್ಯತ್ಯಾಸ:
    ನಾನು ಕರ್ನಾಟಿಕ್ ಶಾಸ್ತ್ರೀಯ ಸಂಗೀತ ಕಲಿತದ್ದು.
    ಸುಗಮ ಸಂಗೀತ ಹಾಗೂ ಕರ್ನಾಟಿಕ್ ಶಾಸ್ತ್ರೀಯ ಸಂಗೀತದಲ್ಲಿ ಜೀವನ ಪೂರ್ತಿ ಕಲಿಯುವಂತದ್ದು ಉಂಟು.

    ಸುಗಮ ಸಂಗೀತ ಮತ್ತು ಕರ್ನಾಟಿಕ್ ಸಂಗೀತದಲ್ಲಿ ಸುಮಾರು ಹಾಡುಗಳಿವೆ. ಸಿ ಅಶ್ವಥ್, ಅನಂತಸ್ವಾಮಿ ಮುಂತಾದ ಹಿರಿಯ ಹಾಡುಗಾರರಿಗೆ ಮತ್ತು ಅವರ ಜೊತೆ ಕೆಲಸ ಮಾಡಿದವರಿಗೆ ಇನ್ನೂ ಸುಮಾರು ಹಳೆಯ ಹಾಡುಗಳು ಗೊತ್ತಿರುತ್ತವೆ. ಅವೆಲ್ಲ ಹಾಡುಗಳು ನಮ್ಮ ಪೀಳಿಗೆಯ ತನಕ ಇನ್ನೂ ಬಂದಿಲ್ಲ. ಆ ಎಲ್ಲ ಹಾಡುಗಳನ್ನು ಕಲಿಯಬೇಕೆಂಬ ಆಸೆ ಇದೆ. ಶಾಸ್ತ್ರೀಯ ಸಂಗೀತದಲ್ಲಿ ಪುರಂದರದಾಸರು 100% ಬರೆದಿದ್ರೆ ನಾವು ಈಗಿನ ಪೀಳಿಗೆಯವರು 20% – 30% ಅಷ್ಟು ಕಲಿತಿರಬಹುದು ಅಷ್ಟೇ. ಶಾಸ್ತ್ರೀಯ ಸಂಗೀತ ತ್ಯಾಗರಾಜರು, ಮುತ್ತು ಸ್ವಾಮಿ ದೀಕ್ಷಿತರು ಬರೆದಂತಹದ್ದು.. ನಾವು ಅದನ್ನು ಓದಿದ್ರೆ ಆಯ್ತು. ಆದರೆ ತುಂಬ ಕಷ್ಟ ಇದೆ. ಸುಗಮ ಸಂಗೀತವನ್ನು ಅನುಭವಿಸಿಕೊಂಡು ಹಾಡುವಂತದ್ದು; ಭಾವನೆ ಅಗತ್ಯ.. ಸುಗಮ ಸಂಗೀತವನ್ನು ಬರೆದಂತಹ ಕವಿಗಳಿದ್ದಾರೆ. ಸುಗಮ ಸಂಗೀತದಲ್ಲಿ ಹಾಡಿನ ಲಿರಿಕ್ಸ್ ಅನ್ನು ಅನುಭವಿಸಿಕೊಂಡು ಹಾಡುವಂತದ್ದು.

    ಸುಗಮ ಸಂಗೀತದಲ್ಲಿ ಭಾವಗೀತೆ, ಜನಪದ ಗೀತೆ ಎಲ್ಲದರಲ್ಲಿಯೂ ಬರಹಕ್ಕೆ ತುಂಬ ಒತ್ತು ಕೊಡುತ್ತಾರೆ.
    ಶಾಸ್ತ್ರೀಯ ಸಂಗೀತದಲ್ಲಿ ರಾಗ, ರಾಗದ ಛಾಯೆ ಮುಖ್ಯ.

    ಸಂಗೀತ ಕ್ಷೇತ್ರದ ನಿಮ್ಮ ಸಾಧನೆಗೆ ಕುಟುಂಬದವರ ಸಹಕಾರ ಹೇಗಿತ್ತು?:
    ಕುಟುಂಬದವರ ಸಹಕಾರ ಇಲ್ಲದಿದ್ರೆ ತುಂಬ ಕಷ್ಟವೇ.
    ನಾನು 5 ವರ್ಷದವಳಿದ್ದಾಗ ನನ್ನನ್ನು ಗುರುಗಳಾದ ರಾಜೇಶ್ವರಿ ಕಣ್ಣಾರಾಯ ಅವರಲ್ಲಿ ಸಂಗೀತ ತರಗತಿಗೆ ಸೇರಿಸಿದ್ದರು. ಬೆಳಿಗ್ಗೆ ಅಪ್ಪ ಸಂಗೀತ ತರಗತಿಗೆ ನನ್ನನ್ನು ಬಿಟ್ಟು ಬಂದ್ರೆ ಅಮ್ಮ ಬಂದು ಕರೆದುಕೊಂಡು ಹೋಗುತ್ತಿದ್ದರು. ಅಮ್ಮ ತರಗತಿ ಮುಗಿಯುವ ತನಕ ಜೊತೆಯಲ್ಲಿ ಇರುತ್ತಿದ್ರು. ಕೆಲವೊಮ್ಮೆ ಗುರುಗಳ ಮನೆಯಲ್ಲಿಯೇ ಇಡೀ ದಿನ ಇರುತ್ತಿದ್ದೆ. ದಿನವಿಡೀ ಇದ್ದು ಮರುದಿನ ಅಮ್ಮ ಬಂದು ಮನೆಗೆ ಕರೆದುಕೊಂಡು ಹೋದದ್ದು ಉಂಟು. ಅಪ್ಪಂಗೆ ಶಾಸ್ತ್ರೀಯ ಸಂಗೀತದ ಜೊತೆಗೆ ಬೇರೆ ಹಾಡುಗಳು ಇಷ್ಟ. ಹಾಗಾಗಿ ಅಪ್ಪ ಬೇರೆ ಹಾಡುಗಳನ್ನು ಕೂಡ ಕೇಳಿಸುತ್ತಿದ್ದರು. ಹಾಗಾಗಿ ನನಗೆ ಶಾಸ್ತ್ರೀಯ ಸಂಗೀತ ಬಿಟ್ಟು ಬೇರೆ ಹಾಡುಗಳನ್ನು ಕಲಿಯಲು ಅನುಕೂಲವಾಯಿತು. ಶಾಸ್ತ್ರೀಯ ಸಂಗೀತ ಮಾತ್ರ ಅಥವಾ ಫಿಲಂ ಸಾಂಗ್ಸ್ ಮಾತ್ರ ಅಂತ ಇರಲಿಲ್ಲ. ಎಲ್ಲಾ ಹಾಡುಗಳನ್ನು ಕೇಳಿಸುತ್ತಿದ್ದರು. ನಾನು ಕಲಿಯಲು ಪ್ರಯತ್ನ ಪಟ್ಟೆ.

    ದೂರ ದೂರದ ಊರಿಗೆ ಹಾಡು ಹಾಡಲು ಅಪ್ಪ ಅಮ್ಮ ಕರೆದುಕೊಂಡು ಹೋಗುತ್ತಿದ್ದರು. ಒಂದು ದಿನ ಚಿತ್ರದುರ್ಗ ಇದ್ರೆ ಇನ್ನೊಂದು ದಿನ ಮಲೆನಾಡು ಭಾಗದಲ್ಲಿ ಇರುತ್ತಿತ್ತು. ಅಲ್ಲಿಗೆಲ್ಲ ಅಪ್ಪ ಅಮ್ಮ ಕರೆದುಕೊಂಡು ಹೋಗುತ್ತಿದ್ದರು.

    ಈಗಲೂ ಅಷ್ಟೇ, ನನಗೆ ಕ್ಲಾಸ್, ಶೂಟಿಂಗ್ ಮತ್ತು ಕಾರ್ಯಕ್ರಮ ಇದ್ದಾಗ ಅಪ್ಪ ಅಮ್ಮ ತುಂಬ ಸಪೋರ್ಟ್ ಮಾಡುತ್ತಾರೆ. ನಾನು ನನ್ನಿಂದಾಗಿ ಏನಾದರೂ ಸಾಧನೆ ಮಾಡಿದೆ ಅಂತ ಹೇಳುವುದಕ್ಕಿಂತ ಅಪ್ಪ ಅಮ್ಮನಿಂದಾಗಿ ನಾನು ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು.

    ಸಂಗೀತ ಕ್ಷೇತ್ರದಲ್ಲಿ ನಿಮ್ಮ ಮುಂದಿನ ಯೋಜನೆ:-
    ಪ್ರಥಮ ವರ್ಷದ ಎಂ.ಬಿ.ಎ.ಯಲ್ಲಿರುವಾಗ ಪುತ್ತೂರಿನ ಸರಸ್ವತಿ ವಿದ್ಯಾ ಮಂದಿರ ಶಾಲೆಯಲ್ಲಿ ಸಂಗೀತ ತರಗತಿ ಪ್ರಾರಂಭಿಸಿದೆ. ಪ್ರಾರಂಭದಲ್ಲಿ ಆಫ್ಲೈನ್ ಕ್ಲಾಸ್ ಮಾತ್ರ ಪ್ರಾರಂಭಿಸಿದೆ. ಈಗ ಆನ್ಲೈನ್ ಕ್ಲಾಸ್ ಕೂಡ ಮಾಡ್ತಿದ್ದೇನೆ.

    “ಕಲಾ ನಿಧಿ ಮ್ಯೂಸಿಕ್ ವರ್ಲ್ಡ್ ಆಫ್ ಮ್ಯೂಸಿಕ್” :- ಬರೀ ಕರ್ನಾಟಿಕ್ ಮ್ಯೂಸಿಕ್ ಮಾತ್ರ ಅಲ್ಲ. ಕೆಲವರಿಗೆ ಬರಿ ಸುಗಮ ಸಂಗೀತ, ಕೆಲವರಿಗೆ ಬರೀ ಫಿಲಂ ಸಾಂಗ್ಸ್, ಕಲಿಯಬೇಕು ಅಂತ ಇರುತ್ತದೆ. ಹಾಗಾಗಿ ಎಲ್ಲಾ ವಿಧದ ಸಂಗೀತ ಕಲಿಕೆಯು ಇರಲಿ ಎಂದು ವರ್ಲ್ಡ್ ಆಫ್ ಮ್ಯೂಸಿಕ್ ಎಂಬ ಹೆಸರನ್ನು ಇಟ್ಟದ್ದು.
    40ಕ್ಕೂ ಹೆಚ್ಚು ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಅಲ್ಲದೆ ಆನ್ಲೈನ್ ಮೂಲಕ ಯು.ಎಸ್.ಎ., ಯುನೈಟೆಡ್ ಕಿಂಗ್ಡಾಮ್ (ಲಂಡನ್), ಜರ್ಮನಿ, ಆಸ್ಟ್ರೇಲಿಯಾ ವಿದೇಶದಲ್ಲಿಯೂ ಇರುವವರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
    ಈಗ ಬೆಳಗ್ಗೆ 4-7 ಗಂಟೆ ತನಕ ಯು.ಎಸ್.ಎ. ಮಕ್ಕಳಿಗೆ ಆನ್ಲೈನ್ ಕ್ಲಾಸ್, ಆಮೇಲೆ ಶೂಟಿಂಗ್ ಇದ್ರೆ ಹೋಗಿ ಬರ್ತೇನೆ. ನಾನಿರುವ ಅಪಾರ್ಟ್ಮೆಂಟ್ ಅಲ್ಲಿ ಮೂರು ಬ್ಯಾಚ್ ಕ್ಲಾಸ್ ಇದೆ. ಅದರ ನಂತರ ಯೂರೋಪ್, ಯು.ಕೆ., ಲಂಡನ್, ಜರ್ಮನಿ ಸ್ವಿಜರ್ಲ್ಯಾಂಡ್ ಮಕ್ಕಳಿಗೆ ಹೇಳಿ ಕೊಡುವುದು.
    ಇದರ ಜೊತೆಯಲ್ಲಿ ಬೇರೆ ಕಡೆ ಕಾರ್ಯಕ್ರಮ ಕೊಡಲು ಹೋಗುತ್ತೇನೆ. ಇಡೀ ದಿನ ಹಾಡುವುದೆಂದರು ನನಗೆ ತುಂಬ ಖುಷಿ, ಇಷ್ಟವೇ.

    ನಾನು ಮತ್ತೆ ಗಣೇಶ್ ಕಾರಂತ್ ಸೇರಿ ‘ಕಡಲ್’ ಎಂಬ ಹೆಸರಿನಲ್ಲಿ ತಂಡ ಮಾಡಿ ಸಂಗೀತ ಕಾರ್ಯಕ್ರಮ ನೀಡುವ ಯೋಜನೆ ಇದೆ ಹಾಗೂ ನಮ್ಮ ಈ ತಂಡದ ಪ್ರಥಮ ಅಂತರಾಷ್ಟ್ರೀಯ ಕಾರ್ಯಕ್ರಮವನ್ನು ಕೀನ್ಯಾದಲ್ಲಿ ನವೆಂಬರ್ ನಲ್ಲಿ ನೀಡಲಿದ್ದೇವೆ.

    ಸುವರ್ಣ ಚಾನೆಲ್ ಅಲ್ಲಿ ಬರುವ ‘ಸುವರ್ಣ ಸಂಕಲ್ಪ’ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದೇನೆ. ತುಂಬ ಒಳ್ಳೆಯ ಅನುಭವ. ಜ್ಯೋತಿಷ್ಯ ಮಾತ್ರ ಅಲ್ಲದೆ ಜೀವನಕ್ಕೆ ಸಂಬಂಧಪಟ್ಟಂತಹ ವಿಷಯಗಳನ್ನೂ ಗುರುಗಳು ಹೇಳುವುದರಿಂದ ಕೇಳಲು ಖುಷಿಯಾಗುತ್ತದೆ, ನಿರೂಪಣೆ ಮಾಡಲು ತುಂಬಾ ಖುಷಿಯಾಗುತ್ತದೆ.

    ಕಾರ್ಯಕ್ರಮ ನೀಡಿರುವ ವೇದಿಕೆಗಳು:-
    ನಾವಿಕ 2023 – ವಿಶ್ವ ಕನ್ನಡ ಸಮ್ಮೇಳನ, ಟೆಕ್ಸಾಸ್ ಯು.ಎಸ್.ಎ. ; ವರ್ಲ್ಡ್ ತುಳು ಸಮ್ಮೇಳನ 2023, ಹೂಸ್ಟನ್ ಟೆಕ್ಸಾಸ್; ತುಳು ಕೂಟ 2019 ಕತಾರ್; ಕಿತ್ತೂರು ಉತ್ಸವ; ಅಬ್ಬಕ್ಕ ಉತ್ಸವ; ಮೈಸೂರು ಅರಮನೆ ದಸರಾ 2025; ಮೈಸೂರು ಅರಮನೆ ಮಾಘಿ ಹಬ್ಬ 2021;
    ಆಳ್ವಾಸ್ ನುಡಿಸಿರಿ ಹಾಗೂ ದೇಶ – ವಿದೇಶದಲ್ಲಿ ಅನೇಕ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿರುತ್ತಾರೆ.

    ಪ್ರಶಸ್ತಿ ಹಾಗೂ ಸನ್ಮಾನ:-
    ಕರ್ನಾಟಕ ಸಂಗೀತ ರತ್ನ,
    ಕರ್ನಾಟಕ ಪ್ರತಿಭಾ ರತ್ನ,
    ಕರ್ನಾಟಕ ಅರಳು ಮಲ್ಲಿಗೆ ಪ್ರಶಸ್ತಿ,
    ಟಿ.ಆರ್. ಕೃಷ್ಣನ್ ಹಾಗೂ ಸುಹಾಸಿನಿ ಹೆಗಡೆ ಯುವ ಪ್ರತಿಭೆ ಪ್ರಶಸ್ತಿ,
    2009-10ರಲ್ಲಿ ಕರ್ನಾಟಕ ಸರಕಾರದಿಂದ “ಪ್ರತಿಭಾ ದೀಪ ಪ್ರಶಸ್ತಿ”.

    ಹಿನ್ನಲೆ ಧ್ವನಿ ನೀಡಿರುವ ಪದ್ಯಗಳು:-
    ವಿ. ಮನೋಹರ್ ಅವರು ನಿರ್ದೇಶಿಸಿದ ಕನ್ನಡ ಚಿತ್ರ ‘ರಣಹೇಡಿ’,
    ತುಳು ಚಿತ್ರ ‘ಬಲಿಪೆ’.
    Original Albums:-
    ಕಟ್ಟಿ ಕಾಯಲು ಅವನಿಲ್ಲ,
    ಕಾರ್ಣಿಕದ ತುಡರ್,
    ಜೈ ಭಾರತಾಂಬೆ,
    “ಹರಿವರಾಸನಂ” (ಅಶ್ವಿನಿ ಆಡಿಯೋ),
    Bestie forever.

    ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

    ಶ್ರವಣ್ ಕಾರಂತ್ ಕೆ.
    ‘ಸುಪ್ರಭಾತ’, ಶಕ್ತಿನಗರ, ಮಂಗಳೂರು.
    : + 91 8317463705

    article artist baikady introduction Music roovari
    Share. Facebook Twitter Pinterest LinkedIn Tumblr WhatsApp Email
    Previous Article‘ಯಕ್ಷ ಸಿರಿ’ ಯಕ್ಷಗಾನ ತರಬೇತಿ ಕೇಂದ್ರದ ಚತುರ್ಥ ವಾರ್ಷಿಕೋತ್ಸವ ಸಮಾರಂಭ | ಅಕ್ಟೋಬರ್ 17
    Next Article ವಿಜಯನಗರ ಬಿಂಬ (ರಿ.) ಡಿಪ್ಲೋಮೊ ವಿದ್ಯಾರ್ಥಿಗಳಿಂದ ಅಭ್ಯಾಸ ಮಾಲಿಕೆ -2 | ಅಕ್ಟೋಬರ್ 18
    roovari

    Add Comment Cancel Reply


    Related Posts

    ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

    October 17, 2026

    ಶಿವಮೊಗ್ಗದಲ್ಲಿ ಸಾಂಸ್ಕೃತಿಕ ದಸರಾ ಕವಿ ಕಾವ್ಯ ಸಂಭ್ರಮ | ಅಕ್ಟೋಬರ್ 19

    October 17, 2026

    ಮಡಿಕೇರಿ ಗಾಂಧಿ ಮೈದಾನದಲ್ಲಿ ‘ಜಾನಪದ ದಸರಾ -2026’ | ಅಕ್ಟೋಬರ್ 18

    October 17, 2026

    ಕನ್ನಡ ಜಾಗೃತಿ ಪುಸ್ತಕ ಬಹುಮಾನಕ್ಕೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 10

    October 17, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.