ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಹಿರಿಯರ ವಿಭಾಗ ಇದರ ವತಿಯಿಂದ 14ನೇ ವರ್ಷದ ಡಿಪ್ಲೋಮೊ ವಿದ್ಯಾರ್ಥಿಗಳಿಂದ ಅಭ್ಯಾಸ ಮಾಲಿಕೆ -2 ಸುಧಾ ಅಡುಕಳ ಅವರ ಕಥೆ ಆಧಾರಿತ ಕಥನ ‘ಶ್ಯಾಮ ಬಂದ ರಾಧೆಯೆಡೆಗೆ’ ನಾಟಕ ಪ್ರದರ್ಶನವನ್ನು ದಿನಾಂಕ 18 ಅಕ್ಟೋಬರ್ 2026ರಂದು ಸಂಜೆ ಗಂಟೆ 4-30 ಮತ್ತು 7-00ಕ್ಕೆ ವಿಜಯನಗರ ಬಿಂಬದ ಸರಳಾಂಗಣದಲ್ಲಿ ಆಯೋಜಿಸಲಾಗಿದೆ. ಡಾ. ಸುಷ್ಮಾ ಎಸ್.ವಿ. ಇವರು ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತಗೊಳ್ಳಲಿದೆ.

