ಉಡುಪಿ : ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 11 ಜುಲೈ 2026ರಂದು ಸಂಜೆ 4-00 ಗಂಟೆಗೆ ಉಡುಪಿಯ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್ ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಮಾನವ ಹಕ್ಕುಗಳ ಆಯೋಗಡ ಸದಸ್ಯರಾದ ಡಾ. ಟಿ. ಶ್ಯಾಮ ಭಟ್ ಇವರು ವಹಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತಕುಮಾರ ಇವರು ಶುಭಾಶಂಸನೆಗೈಯಿಲಿದ್ದಾರೆ. ಡಿ. ಬಿ. ವೆಂಕಟಸುಬ್ಬಾ ಜೋಯಿಸ್ ಪ್ರಶಸ್ತಿಯನ್ನು ವೆಂಕಟರಾಮ ಭಟ್ಟ ಸುಳ್ಯ, ಮಟ್ಟಿ ಮುರಳೀಧರ ರಾವ್ ಪ್ರಶಸ್ತಿಯನ್ನು ಡಾ. ಜಿ.ಕೆ. ಹೆಗಡೆ ಹೊನ್ನಾವರ ಮತ್ತು ಪೆರ್ಲ ಕೃಷ್ಣ ಭಟ್ ಪ್ರಶಸ್ತಿಯನ್ನು ಕೋಟೆ ರಾಮ ಭಟ್ ಕಾರ್ಕಳ ಇವರಿಗೆ ಪ್ರದಾನ ಮಾಡಲಾಗುವುದು. ಪ್ರಸಿದ್ಧ ಕಲಾವಿದರ ಸಹಯೋಗದೊಂದಿಗೆ ‘ಶ್ರೀರಂಗ ತುಲಾಭಾರ’ ತಾಳಮದ್ದಲೆ’ ಪ್ರಸ್ತುತಗೊಳ್ಳಲಿದೆ.

