ಉಡುಪಿ : ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಇವರ ವತಿಯಿಂದ ‘ಭರತ ನೃತ್ಯಾಂಜಲಿ’ ಕಾರ್ಯಕ್ರಮವನ್ನು ದಿನಾಂಕ 26 ಜೂನ್ 2026ರಂದು ಸಂಜೆ 6-00 ಗಂಟೆಗೆ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ರಂಗವೇದಿಕೆಯಲ್ಲಿ ಆಯೋಜಿಸಲಾಗಿದೆ.
ಸಂತೇಕಟ್ಟೆಯ ಶ್ರೀ ವೀರ ನಾಟ್ಯ ನಿಕೇತನದ ಪ್ರತಿಭಾವಂತ ವಿದ್ಯಾರ್ಥಿಗಳು ಡಾ. ಮೇಘನಾ ಶೆಟ್ಟಿಗಾರ್ ಇವರ ನಿರ್ದೇಶನದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.

