ಉಡುಪಿ : ಯಕ್ಷಗಾನ ಕಲಾರಂಗ (ರಿ.) ಉಡುಪಿ ಮತ್ತು ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇದರ ವತಿಯಿಂದ ಕಳೆದ ತಿಂಗಳು ಯಕ್ಷಶಿಕ್ಷಣದ ವಿದ್ಯಾರ್ಥಿಗಳಿಗೆ ಒಂದು ವಾರದ ಸನಿವಾಸ ಶಿಬಿರ ಆಯೋಜಿಸಿತ್ತು. ಅದರಲ್ಲಿ 103 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಆಸಕ್ತ 35 ವಿದ್ಯಾರ್ಥಿಗಳಿಗೆ ದಿನಾಂಕ 11ರಿಂದ 14 ಮೇ 2026ರವರೆಗೆ ನಡೆಸಲಿರುವ ನಾಲ್ಕು ದಿನಗಳ ಮುಖವರ್ಣಿಕೆ ವೇಷಭೂಷಣ ಶಿಬಿರವನ್ನು ಉಡುಪಿಯ ಯಕ್ಷಗಾನ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯರು ಉದ್ಘಾಟಿಸಿದರು.

ಎಂ. ಗಂಗಾಧರ ರಾವ್ ಇವರು ಅಧ್ಯಕ್ಷತೆ ವಹಿಸಿದ್ದು, ಮುರಲಿ ಕಡೆಕಾರ್ ಕಾರ್ಯಕ್ರಮ ಸಂಯೋಜಿಸಿದ್ದರು. ನಾರಾಯಣ ಎಂ. ಹೆಗಡೆ, ಪ್ರಸಾಧನ ತಜ್ಞ ಮಿಥುನ್ ನಾಯಕ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಟ್ಟಡದಲ್ಲಿ ನಡೆಯುತ್ತಿರುವ ಶಿಬಿರಕ್ಕೆ ಗುರು ಬನ್ನಂಜೆ ಸಂಜೀವ ಸುವರ್ಣರು ಭೇಟಿಯಿತ್ತು ಮಕ್ಕಳಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು.


