ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿರುವ ಉದ್ಯಮಿ, ಸಂಘಟಕ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷ ಎಲ್.ವಿ. ಅಮೀನ್ ಇವರ ಜೀವನಾಧಾರಿತ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪ್ರಕಟಿತ ‘ಲೋಕ ಸೇವಕ : ಎಲ್.ವಿ. ಅಮೀನ್’ ಗೌರವ ಗ್ರಂಥ ಲೋಕಾರ್ಪಣ ಸಮಾರಂಭವು ದಿನಾಂಕ 8 ಜುಲೈ 2026ರಂದು ಅಪರಾಹ್ನ 3-00 ಗಂಟೆಗೆ ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್‌ನ ವಿ.ವಿ.ಯ ವಿದ್ಯಾನಗರಿಯ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ನಡೆಯಲಿದೆ.

ವಿ.ವಿ. ಕನ್ನಡ ವಿಭಾಗ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಎಲ್.ವಿ. ಅಮೀನ್ ಮತ್ತು ಸುಧಾ ಎಲ್. ಅಮೀನ್ ದಂಪತಿಯನ್ನು ಗ್ರಂಥ ಗೌರವ ಸಪರ್ಮಣೆಯೊಂದಿಗೆ ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಗುವುದು. ಉತ್ತರ-ಮುಂಬಯಿ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಸಂಸದ ಗೋಪಾಲ್ ಸಿ. ಶೆಟ್ಟಿಯವರು ಗ್ರಂಥ ಲೋಕಾರ್ಪಣೆಗೊಳಿಸಲಿದ್ದು, ಮುಖ್ಯ ಅತಿಥಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಆಗಮಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಬಿಲ್ಲವರ ಮಹಾಮಂಡಳ ಮೂಲ್ಕಿ ಇದರ ನಿಕಟಪೂರ್ವ ಅಧ್ಯಕ್ಷ ಡಾ. ರಾಜಶೇಖರ ಆರ್. ಕೋಟ್ಯಾನ್, ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ, ದೇವಾಡಿಗ ಮಹಾಮಂಡಳದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಪುರುಷೋತ್ತಮ ಕೋಟ್ಯಾನ್, ಸಸಿಹಿಷ್ಣು ಶ್ರೀ ಭಗವತೀ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಆರ್. ಬೆಳ್ಳಡ, ವಾಸ್ತುತಜ್ಞ ಅಶೋಕ್ ಪುರೋಹಿತ್, ಕನ್ನಡ ಸಂಘ ಸಾಂತಾಕ್ರೂಜ್ ಇದರ ಅಧ್ಯಕ್ಷೆ ಸುಜಾತಾ ಆರ್. ಶೆಟ್ಟಿ ಇವರು ಆಗಮಿಸಲಿದ್ದಾರೆ. ಗೌರವ ಗ್ರಂಥ ಸಂಪುಟದ ಸಂಪಾದಕರುಗಳಾದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ, ಆಶಾ ಕೆ. ಸುವರ್ಣ ಇವರು ಉಪಸ್ಥಿತರಿರಲಿದ್ದು, ಹಿರಿಯ ಲೇಖಕ ಹರೀಶ್ ಹೆಜ್ಜಾಡಿ ಇವರು ಗ್ರಂಥವನ್ನು ಪರಿಚಯಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜ ಸೇವಕ, ಸಂಘಟಕ ಸಿಎ ಶ್ರೀನಿವಾಸ ಪಿ. ಸಾಫಲ್ಯ ಮತ್ತು ಶೈಕ್ಷಣಿಕ ಸಾಧನೆಗಾಗಿ ಮೆಹತಾ ಕಾಲೇಜು ಐರೋಲಿ ಈ ಸಂಸ್ಥೆಯನ್ನು ಸಮ್ಮಾನಿಸಲಾಗುವುದು. ಸಾಹಿತ್ಯಾಭಿಮಾನಿಗಳು ಎಲ್.ವಿ. ಅಮೀನ್ ಇವರ ಹಿತೈಷಿಗಳು, ಸಮಾಜ ಬಾಂಧವರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿಸುವಂತೆ ಕನ್ನಡ ವಿಭಾಗ ತಿಳಿಸಿದೆ.

