Subscribe to Updates

    Get the latest creative news from FooBar about art, design and business.

    What's Hot

    ನಿರಂತರ ರಂಗ ತಂಡದ ಕಲಾವಿದರಿಂದ ‘ಪಾರ್ಟಿ’ ನಾಟಕ ಪ್ರದರ್ಶನ

    April 4, 2026

    ನಾದನೃತ್ಯ ಶಾಲೆಯಲ್ಲಿ ‘ನಾದಾಲಯ’ ಗೃಹಸಂಗೀತ ಕಛೇರಿ

    April 4, 2026

    ಬೆಂಗಳೂರಿನ ರಂಗಶಂಕರದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನ | ಏಪ್ರಿಲ್ 07

    April 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಯಕ್ಷಗಾನ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 05
    Camp

    ಯಕ್ಷಗಾನ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 05

    March 31, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೋಟ : ಯಕ್ಷಗಾನ ಕಲಾಕೇಂದ್ರ (ರಿ.) ಹಂಗಾರಕಟ್ಟೆ- ಐರೋಡಿ ಹದಿಮೂರು ವರ್ಷಗಳಿಂದ ಮಕ್ಕಳಿಗಾಗಿ ಯಕ್ಷಗಾನ ತರಬೇತಿ ಶಿಬಿರವನ್ನು ನಡೆಸುತ್ತಾ ಬಂದಿದ್ದು, ದಿನಾಂಕ 15 ಏಪ್ರಿಲ್ 2026ರಿಂದ 03 ಮೇ 2026ರ ತನಕ ಬೆಳಿಗ್ಗೆ 9-15ರಿಂದ ಮಧ್ಯಾಹ್ನ 1-15ರ ತನಕ ಶಾಲಾ ವಿದ್ಯಾರ್ಥಿಗಳಿಗಾಗಿ ‘ನಲಿ- ಕುಣಿ’ ಎಂಬ ಯಕ್ಷಗಾನ ತರಬೇತಿ ಶಿಬಿರವನ್ನು ಆಯೋಜಿಸಿದೆ.

    ಯಕ್ಷಗಾನ ನೃತ್ಯ ಹಾಗೂ ಅಭಿನಯದ ತರಬೇತಿಯನ್ನು ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ನೀಡಲಾಗುವುದು. ಖ್ಯಾತ ಯಕ್ಷಗಾನ ವಿದ್ವಾಂಸರೂ ತರಬೇತುದಾರ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ ನಿರ್ದೇಶನದಲ್ಲಿ ನಡೆಯುವ ಈ ತರಬೇತಿ ಶಿಬಿರದಲ್ಲಿ ಸಹ ಶಿಕ್ಷಕರಾಗಿ ಕೇಶವ ಆಚಾರ್, ಜಯೇಂದ್ರ ಅಡಿಗ, ರಾಘವೇಂದ್ರ ಗಾಣಿಗ ಮಟಪಾಡಿ ಇವರು ಭಾಗವಹಿಸಲಿದ್ದಾರೆ. ತರಬೇತಿ ಶಿಬಿರವನ್ನು ಸೇರಲಿಚ್ಚಿಸುವ ವಿದ್ಯಾರ್ಥಿಗಳ ಪೋಷಕರು ರಾಜಶೇಖರ ಹೆಬ್ಬಾರ್ ಕಾರ್ಯದರ್ಶಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಇವರನ್ನು ದೂರವಾಣಿ ಸಂಖ್ಯೆ 98806 05610 ಅಥವಾ ಗುಂಡ್ಮಿ ರಾಮಚಂದ್ರ ಐತಾಳ 94488 24559 ಮುಖಾಂತರ ದಿನಾಂಕ 05 ಏಪ್ರಿಲ್ 2026ರ ಒಳಗೆ ಸಂಪರ್ಕಿಸುವುದು ಮತ್ತು ದಿನಾಂಕ 09 ಏಪ್ರಿಲ್ 2026ರ ಒಳಗೆ ಕಲಾಕೇಂದ್ರದ ಕಚೇರಿಯಿಂದ ನೋಂದಣಿ ಅರ್ಜಿಯನ್ನು ಪಡೆದು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಕೇಳಿಕೊಳ್ಳಲಾಗಿದೆ ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.

     

    baikady camp roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleದತ್ತಿ ನಿಧಿ ಪ್ರಾಯೋಜಿತ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂವಾದ ಕಾರ್ಯಕ್ರಮ
    Next Article ‘ಕಲಾಭವ’ ಮಾಸಿಕ ನೃತ್ಯ ಸರಣಿ-07ರಲ್ಲಿ ಸಂಪೂರ್ಣ ರಾಮಾಯಣ ಪ್ರಸ್ತುತಿ
    roovari

    Add Comment Cancel Reply


    Related Posts

    ನಿರಂತರ ರಂಗ ತಂಡದ ಕಲಾವಿದರಿಂದ ‘ಪಾರ್ಟಿ’ ನಾಟಕ ಪ್ರದರ್ಶನ

    April 4, 2026

    ನಾದನೃತ್ಯ ಶಾಲೆಯಲ್ಲಿ ‘ನಾದಾಲಯ’ ಗೃಹಸಂಗೀತ ಕಛೇರಿ

    April 4, 2026

    ಬೆಂಗಳೂರಿನ ರಂಗಶಂಕರದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನ | ಏಪ್ರಿಲ್ 07

    April 4, 2026

    ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ‘ರಂಗಾಭಿನಯ ಕಾರ್ಯಾಗಾರ’ | ಏಪ್ರಿಲ್ 25 ಮತ್ತು 26

    April 4, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.