ಹಾವೇರಿ : ಶ್ರೀ ಗಜಾನನ ಯುವಕ ಮಂಡಳ (ರಿ) ಶೇಷಗಿರಿ, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ ಇದರ ವತಿಯಿಂದ ‘ಸೃಜನ ಪ್ರಶಸ್ತಿ’ಗಾಗಿ ಕೃತಿಗಳ ಆಹ್ವಾನಗಳನ್ನು ಆಹ್ವಾನಿಸಲಾಗಿದೆ. ಶ್ರೀ ಗಜಾನನ ಯುವಕ ಮಂಡಳ ಶೇಷಗಿರಿ 2025ರಲ್ಲಿ ಪ್ರಕಟವಾದ ಒಳ್ಳೆಯ ಅನುವಾದಿತ ಕೃತಿಯೊಂದಕ್ಕೆ ಸೃಜನ ಪ್ರಶಸ್ತಿ ನೀಡುತ್ತಿದ್ದು, ಈ ಪ್ರಶಸ್ತಿ ರೂ.5,000/- ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ. ಆಸಕ್ತ ಲೇಖಕ/ಕಿಯರು ನಿಯಮಾನುಸಾರವಾಗಿ ಪುಸ್ತಕಗಳನ್ನು ಕಳುಹಿಸಬಹುದು.
ನಿಯಮಗಳು :
ಯಾವುದೇ ಭಾರತೀಯ ಭಾಷೆಗಳಿಂದ ನೇರವಾಗಿ ಕನ್ನಡಕ್ಕೆ ಅನುವಾದವಾದ ಕಥಾಸಂಕಲನ ಅಥವಾ ಕಾದಂಬರಿಗಳನ್ನು ಮಾತ್ರ ಪರಿಗಣಿಸಲಾಗುವುದು.
ಇಂಗ್ಲೀಷ್ ಅಥವಾ ಬೇರಾವುದೇ ವಿದೇಶಿ ಭಾಷೆಯಿಂದ ಅನುವಾದಗೊಂಡ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
2025ರಲ್ಲಿ ಪ್ರಥಮ ಮುದ್ರಣ ಕಂಡ ಕೃತಿಗಳನ್ನು ಮಾತ್ರ ಪ್ರಶಸ್ತಿ ಪರಿಗಣಿಸಲಾಗುವುದು.
ಅನುವಾದಿತ ಕಥಾಸಂಕಲನ ಅಥವಾ ಕಾದಂಬರಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು.
ಅನುವಾದಿತ ಕೃತಿಯ ಮೂರು ಪ್ರತಿಗಳನ್ನು ರಿಜಿಸ್ಟರ್ಡ್ ಅಂಚೆಯ ಮೂಲಕ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು. ಲೇಖಕರ ಪೂರ್ಣ ವಿಳಾಸ ಮತ್ತು ಫೋನ್ ನಂ. ಅಗತ್ಯವಾಗಿ ನಮೂದಿಸಬೇಕು.
ಪುಸ್ತಕಗಳನ್ನು ಕಳುಹಿಸಲು ಕೊನೆಯ ದಿನಾಂಕ 05 ಮೇ 2026.
ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಅಥವಾ ಸಂಚಾಲಕರನ್ನು ಸಂಪರ್ಕಿಸಿ. ಶ್ರೀ ನಾಗರಾಜ ಧಾರೇಶ್ವರ : 90085 51395 ಮತ್ತು ಶ್ರೀ ಸೋಮನಾಥ ಗುರಪ್ಪನವರ : 81978 99849.
ವಿಳಾಸ : ಶ್ರೀ ಪ್ರಭು ಗುರಪ್ಪನವರ ಅಧ್ಯಕ್ಷರು ಶ್ರೀ ಗಜಾನನ ಯುವಕ ಮಂಡಳ, ಶೇಷಗಿರಿ -581102, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ. ಮೊಬೈಲ್ : 80957 19018.

