ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 09 ಮೇ 2026ರಂದು ಸಂಜೆ 4-00 ಗಂಟೆಗೆ ‘ಕಾವ್ಯಾಂ ವ್ಹಾಳೊ-14’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದು, “ಪರಿಚಯ” ಪಾಂಬೂರ್ ಇದರ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ನೊರೊನ್ಹಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕುಡುಬಿ ಸಮುದಾಯದ ಹಿರಿಯ ಕಲಾವಿದರಾದ ಶ್ರೀ ಕೆ. ಸುಂದರ ಗೌಡ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಿಗಳಾದ ಡಾ. ವೆಂಕಟೇಶ್ ನಾಯಕ್ರವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಅವಿಲ್ ರಸ್ಕಿನ್ಹಾ, ಸಂಜನಾ ಮಥಾಯಸ್, ಪ್ರವೀಣ್ ತಾವ್ರೊ, ಕುಸುಮ ಕಾಮತ್, ಜೆರಿ ಬೊಂದೆಲ್, ವಿಸ್ಮಯಾ ಲೋಬೊ, ರಮಾನಾಥ ಮೇಸ್ತ, ಸುಮಾ ವಸಂತ್ ಮತ್ತು ಡಾ. ಸುಮತಿ ಕಾರ್ಕಳ ಇವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
