ಮಂಗಳೂರು : ಡಾ. ಶೈಲಾರಾಣಿ ಬೋಳಾರ್ ಇವರು ಬರೆದ ‘ಮನಸಿನ ಪುಟಗಳ ನಡುವೆ’ ಕೃತಿಯ ಬಿಡುಗಡೆ ಸಮಾರಂಭವು ದಿನಾಂಕ 29 ಮಾರ್ಚ್ 2026ರಂದು ಮಂಗಳೂರಿನ ಬೆಂದೂರ್ ಸಂತ ಸಬಾಸ್ಟಿಯನ್ ಸಭಾಂಗಣದಲ್ಲಿ ನಡೆಯಿತು.
ಹಿರಿಯ ಲೇಖಕಿ ಹೇಮಮಾಲ ಬಿ. ಇವರು ಕೃತಿ ಬಿಡುಗಡೆಗೊಳಿಸಿದರು. ಮಂಗಳೂರಿನ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ, ಲೇಖಕಿ ಡಾ. ಕೃಷ್ಣಪ್ರಭ ಎಂ. ಕೃತಿಯನ್ನು ವಿಮರ್ಶಿಸಿದರು. ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ, ಲೇಖಕಿ ಡಾ. ಜಯಶ್ರೀ ಕದ್ರಿ ಅವರು ಪುಸ್ತಕದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಸಂತ ಆಗ್ನೇಸ್ ಕಾಲೇಜಿನ ಮುಖ್ಯ ಗ್ರಂಥಾಧಿಕಾರಿ ಡಾ. ವಿಶಾಲ ಬಿ.ಕೆ. ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪುಸ್ತಕದ ಲೇಖಕಿ ಡಾ. ಶೈಲಾರಾಣಿ ಬೋಳಾರ್ ಸ್ವಾಗತಿಸಿ, ಡಾ. ಶಕೀಲಾ ಬಿ. ವಂದಿಸಿ, ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

