Subscribe to Updates

    Get the latest creative news from FooBar about art, design and business.

    What's Hot

    ‘ಎ ಬಯೋಗ್ರಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ’ ಕೃತಿ ಲೋಕಾರ್ಪಣೆ

    June 23, 2026

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ‘ಯಕ್ಷಗಾನ ಏಕಪಾತ್ರಾಭಿನಯ’

    June 23, 2026

    ವಿಶ್ವ ಕೊಂಕಣಿ ಕೇಂದ್ರದ ಐದು ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    June 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ರಾಮಕೃಷ್ಣ ಮಠದಲ್ಲಿ ವಿದ್ವಾನ್ ಎನ್. ಗೋಪಾಲಕೃಷ್ಣ ಐಯ್ಯರ್ ಸ್ಮರಣಾರ್ಥ ಸಂಗೀತ ಕಛೇರಿ
    Music

    ರಾಮಕೃಷ್ಣ ಮಠದಲ್ಲಿ ವಿದ್ವಾನ್ ಎನ್. ಗೋಪಾಲಕೃಷ್ಣ ಐಯ್ಯರ್ ಸ್ಮರಣಾರ್ಥ ಸಂಗೀತ ಕಛೇರಿ

    May 19, 2026Updated:May 20, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠದ ಸಹಯೋಗದೊಂದಿಗೆ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿದ್ವಾನ್ ಎನ್. ಗೋಪಾಲಕೃಷ್ಣ ಅಯ್ಯರ್ ಶಿಷ್ಯರ ಸಹಕಾರದೊಂದಿಗೆ ಸಂಗೀತ ಪರಿಷತ್ ಮಂಗಳೂರು (ರಿ.) ಇವರ ಆಶ್ರಯದಲ್ಲಿ ಸಂಗೀತ ವಿದ್ವಾನ್ ಎನ್. ಗೋಪಾಲಕೃಷ್ಣ ಐಯ್ಯರ್ ಸ್ಮರಣಾರ್ಥ ಸಂಗೀತ ಕಛೇರಿಯು ದಿನಾಂಕ 17 ಮೇ 2026ರ ಭಾನುವಾರ ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಭವನದಲ್ಲಿ ನಡೆಯಿತು.

    ಪುತ್ತೂರಿನ ಕುಮಾರಿ ಅನುಶ್ರೀ ಮಳಿ ಇವರ ಹಾಡುಗಾರಿಕೆಗೆ ವಿಜೇತ ಸುಬ್ರಹ್ಮಣ್ಯ ಇವರ ವಯಲಿನ್ ಹಾಗೂ ವೆಂಕಟ ಯಶಸ್ವಿ ಇವರು ಮೃದಂಗ ಸಹಕಾರ ಹಾಗೂ ಚೆನೈನ ಭರತ್ ನಾರಾಯಣ್ ಇವರ ಹಾಡುಗಾರಿಕೆಗೆ ವಯಲಿನ್ ನಲ್ಲಿ ತ್ರಿಶೂರ್ ನ ಆದಿತ್ಯ ಅನಿಲ್, ಮೃದಂಗದಲ್ಲಿ ಕೊಚ್ಚಿಯ ಕೃಪಾಲ್ ಸಾಯಿರಾಮ್ ಹಾಗೂ ಮೋರ್ಸಿಂಗ್ ನಲ್ಲಿ ಪುತ್ತೂರಿನ ಬಾಲಕೃಷ್ಣ ಸಾಥ್ ನೀಡಿದರು.

    ವಿದುಷಿ ವೀಣಾ ಶಾಸ್ತ್ರಿಯವರು ಅನುಶ್ರೀ ಕಛೇರಿಯ ಬಗ್ಗೆ ತಮ್ಮ ಅನಿಸಿಕೆ ಪ್ರಸ್ತುತ ಪಡಿಸಿ “ಯುವ ಸಮುದಾಯದವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಸಕ್ತಿಯಿಂದ ಕಲಿಯಬೇಕು. ಹೆತ್ತವರು ತಮ್ಮ ಮಕ್ಕಳಲ್ಲಿ ಆದಷ್ಟು ನಮ್ಮ ಸಂಸ್ಕೃತಿಯ ಒಲವು ಮೂಡಿಸಬೇಕು” ಎಂದು ಕಿವಿಮಾತು ಹೇಳಿದರು. ಎನ್.ಜೆ. ಗೋಪಾಲ್ ಮೌಧ್ಗಲ್ ಅವರು ಭಾರತ್ ನಾರಾಯಣ್ ಕಛೇರಿಯ ಬಗ್ಗೆ ವಿವರಿಸುತ್ತಾ ತಮ್ಮ ಮೆಚ್ಚುಗೆಯನ್ನು ಸೂಚಿಸುವ ಮೂಲಕ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು. ಕೃಷ್ಣಮೂರ್ತಿ ಹಾಗೂ ಅಶ್ವಿನಿಯವರು ಕಲಾವಿದರನ್ನು ಪರಿಚಯಿಸಿದರು.

    ಗೋಪಾಲಕೃಷ್ಣ ಐಯ್ಯರ್ ಅವರ ಶಿಷ್ಯರೂ ಹಾಗೂ ಹೈಕೋರ್ಟಿನ ವಕೀಲರೂ ಆಗಿರುವ ಶ್ರೀಯುತ ರವಿರಾಜ್ ಇವರು ಕಲಾವಿದರನ್ನು ಗೌರವಿಸಿದರು. ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಜಿತಕಾಮಾನಂದಜೀ, ಸಂಗೀತ ಪರಿಷತ್ತಿನ ಗೌರವಾಧ್ಯಕ್ಷ ಡಾ. ಸಿ.ಆರ್. ಬಲ್ಲಾಳ್, ಡಾ. ಚಕ್ರಪಾಣಿ, ಅಡ್ವೊಕೇಟ್ ಅನಂತಕೃಷ ಉಡುಪ, ಐಯ್ಯರ್ ಅವರ ಹಲವಾರು ಶಿಷ್ಯಂದಿರು ಹಾಗೂ ಇತರ ಕಲಾಭಿಮಾನಿಗಳು ಉಪಸ್ಥಿತರಿದ್ದರು.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Article‘ಕೀರ್ತನಾರೋಹಣ’ ಕರ್ನಾಟಕ ಶಾಸ್ತ್ರೀಯ ಸಂಗೀತದ ಸರಣಿ ಕಾರ್ಯಕ್ರಮ
    Next Article ಸುವರ್ಣ ವರ್ಷ ಆಚರಿಸಿದ ಕಲಾರಂಗಕ್ಕೆ ಶತಮಾನೋತ್ಸವ ಆಚರಿಸುತ್ತಿರುವ ಕಲಾ ಸಂಘಟನೆಯ ಗೌರವ
    roovari

    Add Comment Cancel Reply


    Related Posts

    ‘ಎ ಬಯೋಗ್ರಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ’ ಕೃತಿ ಲೋಕಾರ್ಪಣೆ

    June 23, 2026

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ‘ಯಕ್ಷಗಾನ ಏಕಪಾತ್ರಾಭಿನಯ’

    June 23, 2026

    ವಿಶ್ವ ಕೊಂಕಣಿ ಕೇಂದ್ರದ ಐದು ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    June 23, 2026

    ಡಾ. ಪಾದೇಕಲ್ಲು ವಿಷ್ಣು ಭಟ್ ಮತ್ತು ಶ್ರೀ ಟಿ.ಎ.ಎನ್. ಖಂಡಿಗೆ ಇವರಿಗೆ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ ಘೋಷಣೆ

    June 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.