ಪುತ್ತೂರು : ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಪ್ರಾಯೋಜನೆಯಲ್ಲಿ ‘ನೃತ್ಯ ತರಂಗಿಣಿ-6’ ಸರಣಿ ಭರತನಾಟ್ಯ ಪ್ರದರ್ಶನವು ದಿನಾಂಕ 26 ಜುಲೈ 2026ರಂದು ಪುತ್ತೂರಿನ ಜೈನಭವನದಲ್ಲಿ ನಡೆಯಿತು.
ಮೂಡುಬಿದಿರೆ ಆರಾಧನಾ ನೃತ್ಯಕೇಂದ್ರದ ನೃತ್ಯಗುರು ವಿದುಷಿ ಸುಖದಾ ಬರ್ವೆ ಮತ್ತು ಕಲ್ಲಡ್ಕ ಕಲಾ ನಿಕೇತನ ಡ್ಯಾನ್ಸ್ ಫೌಂಡೇಶನ್ ನೃತ್ಯಗುರು ವಿದುಷಿ ವಿದ್ಯಾ ಮನೋಜ್ ಇವರು ದೀಪ ಬೆಳಗಿನ ನೃತ್ಯ ತರಂಗಿಣಿ-6 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ನೃತ್ಯೋಪಾಸನಾ ಕಲಾ ಅಕಾಡೆಮಿ ಉಪಾಧ್ಯಕ್ಷ ಡಾ. ಕೃಷ್ಣ ಕುಮಾರ್ ಪಿ.ಎಸ್., ಆತ್ಮಭೂಷಣ್ ವೇದಿಕೆಯಲ್ಲಿದ್ದರು. ನೃತ್ಯೋಪಾಸನಾ ಕಲಾ ಅಕಾಡೆಮಿ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ನೃತ್ಯೋಪಾಸನಾ ಕಲಾ ಅಕಾಡೆಮಿ ವಿದ್ಯಾರ್ಥಿಗಳಾದ ಎ. ವಿದ್ಯಾಲಕ್ಷ್ಮಿ ಮತ್ತು ಧನ್ಯಶ್ರೀ ಕೆ. ಪ್ರಾರ್ಥಿಸಿದರು. ಫಲ್ಗುಣಿ ವಿ. ಮತ್ತು ಅಕ್ಷಯ ಶಂಕರಿ ಬಿ. ಪರಿಚಯಿಸಿದರು. ತೇಜಸ್ವಿರಾಜ್ ವಂದಿಸಿ, ಸಿಂಚನಾ ಎಸ್. ಭಟ್ ಕಾರ್ಯಕ್ರಮ ನಿರೂಪಿಸಿ ಮತ್ತು ಸುವರ್ಣ ಮತ್ತು ಶರಣ್ಯ ನೃತ್ಯ ಪ್ರದರ್ಶನ ನಿರೂಪಿಸಿದರು. ಈ ಸಂದರ್ಭ ಪ್ರತಿಭಾವಂತ ಕಲಾವಿದರಾದ ಮೂಡುಬಿದಿರೆಯ ಪ್ರಕೃತಿ ಪಿ. ಮಾರೂರು ಹಾಗೂ ವಿದುಷಿ ಡಾ. ಮಹಿಮಾ ಎಂ.ಪಣಿಕ್ಕರ್ ಕಲ್ಲಡ್ಕ ಇವರ ಮನಮೋಹಕ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

