ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರು ವತಿಯಿಂದ ಸಂಸ್ಥೆಯ 75ನೇ ವರ್ಷದ ಅಂಗವಾಗಿ ವಿಶೇಷ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ‘ರಾಗ ಸಂಧ್ಯಾ’ವನ್ನು ದಿನಾಂಕ 19 ಏಪ್ರಿಲ್ 2026ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಖ್ಯಾತ ಗಾಯಕ ಶ್ರೀ ಸಿದ್ಧಾರ್ಥ ಬೆಳ್ಮಣ್ಣು ಇವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ತಬಲಾದಲ್ಲಿ ಶ್ರೀ ಮಾಯಾಂಕ್ ಬೇಡೇಕರ್ ಗೋವಾ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ಪ್ರಸಾದ್ ಕಾಮತ್ ಉಡುಪಿ ಅವರು ಸಹಕರಿಸಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ಇವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವು ಭಕ್ತಿ ಮತ್ತು ಸಂಗೀತದ ಸಮನ್ವಯದಿಂದ ಶ್ರೋತೃಗಳಿಗೆ ಆಧ್ಯಾತ್ಮಿಕ ಅನುಭವವನ್ನು ನೀಡುವ ಉದ್ದೇಶ ಹೊಂದಿದೆ. ಭಕ್ತರು ಮತ್ತು ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಾಮಕೃಷ್ಣ ಮಿಷನ್ ಮಂಗಳೂರು ವಿನಂತಿಸಿದೆ.

