ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಇದರ ಮೂವತ್ತನೇ ವರ್ಷದ ಸಂಭ್ರಮದಲ್ಲಿ ಶ್ರೀ ರಾಮ ನವಮಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ‘ಸಂಪೂರ್ಣ ರಾಮಾಯಣ ನೃತ್ಯ ಸಪ್ತಾಹ’ವನ್ನು ದಿನಾಂಕ 24, 26, 27, 29, 30 31 ಮಾರ್ಚ್ ಮತ್ತು 01 ಏಪ್ರಿಲ್ 2026ರಂದು ಪುತ್ತೂರಿನ ಕಲಾದೀಪ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಇವರು ನಡೆಸಿಕೊಡಲಿದ್ದಾರೆ.
ದಿನಾಂಕ 24 ಮಾರ್ಚ್ 2026ರಂದು ಬಿ.ಸಿ. ರೋಡ್ ಸಂಚಯಗಿರಿ ಶ್ರೀ ಗಣೇಶ ಕೃಪಾದಲ್ಲಿ, ದಿನಾಂಕ 26 ಮಾರ್ಚ್ 2026ರಂದು ಕಡಂಬು – ವಿಟ್ಲ, ಅರಳೀವೃಂದ, ಶ್ರೀ ವೆಂಕಟರಮಣ ಭಜನಾ ಮಂದಿರ (ರಿ.)ದಲ್ಲಿ, ದಿನಾಂಕ 27 ಮಾರ್ಚ್ 2026ರಂದು ಮಂಚಿ, ಲಯನ್ಸ್ ಕ್ಲಬ್, ವಸುಧಾರಾ ಕಲಾಕೇಂದ್ರದಲ್ಲಿ, ದಿನಾಂಕ 29 ಮಾರ್ಚ್ 2026ರಂದು ಮಂಗಳೂರಿನ ಕಲಾಸೂರ್ಯ ನೃತ್ಯಾಲಯದಲ್ಲಿ, ದಿನಾಂಕ 30 ಮಾರ್ಚ್ 2026ರಂದು ಡಾ. ಮೋಹನ್ ದಾಸ್ ಗೌಡ ಪಂಚಮಿ ಹಿತಾಯುರ್ಧಾಮ ಕೊಕ್ಕಡ ಇವರ ಸ್ವಗೃಹದಲ್ಲಿ, ದಿನಾಂಕ 31 ಮಾರ್ಚ್ 2026ರಂದು ಮಾಣಿ ಸರಸ್ವತಿ ನಿಲಯ ಪಾರ್ಪಜೆ ಮನೆಯಲ್ಲಿ ಮತ್ತು ದಿನಾಂಕ 01 ಏಪ್ರಿಲ್ 2026ರಂದು ಪುತ್ತೂರು ಮುಕ್ರಂಪಾಡಿ ಆನಂದಾಶ್ರಮದಲ್ಲಿ ನೃತ್ಯ ಪ್ರದರ್ಶನ ನಡೆಯಲಿದೆ.

