ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಹಾಗೂ ಕಥಾಬಿಂದು ಪ್ರಕಾಶನ ಇವರ ಆಶ್ರಯದಲ್ಲಿ ‘ಸಾಹಿತ್ಯಾವಲೋಕನ’ ಕಾರ್ಯಕ್ರಮವು ದಿನಾಂಕ 27 ಫೆಬ್ರವರಿ 2026ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರಗಲಿದೆ.
ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ವಹಿಸಲಿದ್ದು, ಕಾರ್ಯಕ್ರಮವನ್ನು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಉದ್ಘಾಟಿಸಲಿರುವರು. ಡಾ. ಕೊಳ್ಚಪ್ಪ ಗೋವಿಂದ ಭಟ್, ಕೆ.ವಿ. ಲಕ್ಷ್ಮಣಮೂರ್ತಿ, ಜಯಾನಂದ ಪೆರಾಜೆ, ಪಿ.ವಿ. ಪ್ರದೀಪಕುಮಾರ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಸುನೀತಾ ಪ್ರದೀಪಕುಮಾರ್ ರಚಿತ ‘ಶ್ರೀ ಮಾತಾ ವೈಷ್ಟೋ ದೇವಿ’, ಜಾನಕಿದೇವಿ ರಚಿತ ‘ಬೃಂದಾವನ’, ಡಾ. ಪ್ರೇಮ ಪಿ.ವೈ.ಕೆ. ಮೋಳೆ ರಚಿತ ‘ನೀಲಿರಾಗ’, ನಾ.ಭಾ. ಕೆಂಪರಾಜ್ ಶಾಂತಲ ರಚಿತ ‘ನಾ ಕಂಡಂತೆ ರಾಜ’ ಈ ನಾಲ್ಕು ಕೃತಿಗಳನ್ನು ಮೂಡುಬಿದ್ರೆಯ ಶ್ರೀಪತಿ ಭಟ್ ಬಿಡುಗಡೆಗೊಳಿಸಲಿರುವರು. ಈ ಸಂದರ್ಭದಲ್ಲಿ 20 ಕವಿಗಳಿಂದ ಕವಿಗೋಷ್ಠಿ ಜರಗಲಿದ್ದು, ಸಾಹಿತಿ ಪ್ರವೀಣ್ ವ್ಹಿ. ಕುಲಜರ್ಣಿ, ಪ್ರಕಾಶ ಸುವರ್ಣ ಕಟಪಾಡಿ, ಅನಿತಾ ಶೆಣೈ ಅವರನ್ನು ಗೌರವಿಸಲಾಗುವುದು.

