Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವೀರರಾಣಿ ಅಬ್ಬಕ್ಕ- ರಾಷ್ಟ್ರೀಯ ವಿಚಾರ ಸಂಕಿರಣ

    February 17, 2026

    ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಪ್ರಕಟ

    February 16, 2026

    ಮಕ್ಕಳ ಬಹುಭಾಷಾ ಕವಿಗೋಷ್ಠಿ ಮತ್ತು ಕವಿತೆ ಹುಟ್ಟುವ ಗುಟ್ಟು ಕಾರ್ಯಾಗಾರ | ಫೆಬ್ರವರಿ 22

    February 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » “ಶ್ಯಾಮಲಾ ಸಂಗೀತ ಸಭಾ”ದ ಗೃಹ ಸಂಗೀತ ಕಛೇರಿ -5
    Music

    “ಶ್ಯಾಮಲಾ ಸಂಗೀತ ಸಭಾ”ದ ಗೃಹ ಸಂಗೀತ ಕಛೇರಿ -5

    March 21, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    21 ಮಾರ್ಚ್ 2023, ಮಂಗಳೂರು: ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಆಯೋಜಿಸುತ್ತಿರುವ ಸಂಗೀತ ಪರಿಷತ್ತಿನ ಹೆಮ್ಮೆಯ ಸದಸ್ಯರು ಹಾಗೂ ಕಲಾಪೋಷಕರಾದ ಪ್ರಭಾಚಂದ್ರಮಯ್ಯರು ಈ ತಿಂಗಳಲ್ಲಿ ಅಪರೂಪ ಎಂಬಂತೆ “ಯಕ್ಷಗಾನ ಹಾಡುಗಳ” ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ 18-03-2023ರಂದು ಕದ್ರಿ ಕಂಬಳದ ಗೋಕುಲ ರೆಸಿಡೆನ್ಸಿಯಲ್ಲಿ ಆಯೋಜಿಸಿದರು.

    ಗೊತ್ತು ಗುರಿ ಇಲ್ಲದ ಧೀರ್ಘ ಆಲಾಪನೆಗಳು, ಪುನರಾವರ್ತನ, ಯಕ್ಷಗಾನ ಹಾಡುಗಳ ಹೆಸರಿನಲ್ಲಿ ಜಾನಪದ, ಸಿನೆಮಾ, ಭಾವಗೀತೆಗಳನ್ನು “ಗಾನ ವೈಭವ” ಎಂಬ ಹೆಸರಿನಲ್ಲಿ ಕೇಳಿ ಕೇಳಿ ರೋಸಿ ಹೋದ ಮನಸ್ಸಿಗೆ ಪುತ್ತಿಗೆ ಹೊಳ್ಳರ ಪರಂಪರೆಯ ಯಕ್ಷಗಾನಯ ಶೈಲಿಯ ಹಾಡುಗಳ ಸಿಂಚನ ಮನಸ್ಸಿಗೆ ಮುದ ನೀಡಿತು. ಹಾಡುಗಳ ನಡುವೆ ಆ ಹಾಡಿನ ತಾಳ ಹಾಗೂ ರಾಗದ ಔಚಿತ್ಯದ ಬಗ್ಗೆ ಕೊಟ್ಟ ವಿವರಣೆ ಶ್ರೋತ್ರುಗಳ ಜ್ಞಾನ ಭಂಡಾರವನ್ನು ಹೆಚ್ಚಿಸಿತು. ಹೊಳ್ಳರು, ಅಗರಿ, ಬಲಿಪ, ಕಡತೋಕರ ಶೈಲಿಯನ್ನು ಉದಾಹರಣೆ ಸಹಿತ ಹಾಡಿತೋರಿಸಿದರು. ಉಳಿತ್ತಾಯರು ಭಾಗವತರ ಮನೋಧರ್ಮಕ್ಕೆ ತಕ್ಕಂತೆ ಮದ್ದಳೆ ನುಡಿಸಿ ರಸಿಕರ ಮನಸ್ಸು ಗೆಲ್ಲುವ ಜತೆ, ಹಿತಮಿತವಾದ ಮಾತುಗಳ ಮೂಲಕ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಸಹಾ ಹೊತ್ತುಕೊಂಡರು.

    ಹೆಚ್ಚಿನ ಶ್ರೋತ್ತುಗಳು ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿರುವುದರಿಂದ, ಶಾಸ್ತ್ರೀಯ ಸಂಗೀತದ ರಾಗ ಪ್ರಸ್ತುತಿ ಹಾಗೂ ಯಕ್ಷಗಾನ ಹಾಡುಗಳ ರಾಗ ಪ್ರಸ್ತುತಿಗೂ ಇರುವ ಸಾಮ್ಯತೆ ಹಾಗೂ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಯಿತು.

    ಶ್ರೋತ್ರುವರ್ಗದಲ್ಲಿ ಡಾ.ಜೋಶಿ, ವಿದುಷಿ ಪ್ರತಿಭಾ ಸಾಮಗ, ಕುಕ್ಕವಳ್ಳಿ ಮುಂತಾದ ವಿದ್ವಾಂಸರ ಜತೆ ತುಂಬಾ ಕಲಾವಿದರೂ ಇದ್ದುದರಿಂದ, ಪುತ್ತಿಗೆ/ಉಳಿತ್ತಾಯರು ತುಂಬಾ ಮುತುವರ್ಜಿಯಿಂದ (They were at their best) ಕಾರ್ಯಕ್ರಮ ನಡೆಸಿ ಕೊಟ್ಟರು.

    ಒಟ್ಟಿನಲ್ಲಿ ಪರಂಪರೆಯ ಯಕ್ಷಗಾನ ಹಾಡುಗಳು, ನಡುನಡುವೆ ವಿವರಣೆ, ಸಂವಾದವಿದ್ದುದರಿಂದ ಒಂದು ವಿಧದ ಆತ್ಮೀಯ ವಾತಾವರಣ ನಿರ್ಮಾಣವಾಗಿ, ಈ ಕಾರ್ಯಕ್ರಮ ತುಂಬಾ ದಿನ ನೆನಪಿನಲ್ಲಿ ಇರುವಂತೆ ನಡೆಯಿತು. ಯಕ್ಷಗಾನದ ಕೆಲವು ಅಪೂರ್ವ ಹಾಡುಗಳಿಂದ ರಸಿಕರ ಮನಸ್ಸನ್ನು ತಣಿಸುವ ಜತೆ, ಪುಷ್ಕಳ ಉಪಹಾರದ ವ್ಯವಸ್ಥೆ ಮಾಡಿ ಮಯ್ಯರು ಸಭಿಕರ ಹೊಟ್ಟೆಯನ್ನು ತಣಿಸಿ ತಮ್ಮ ಧಾರಾಳ ಮನಸ್ಸನ್ನು ಅನಾವರಣ ಮಾಡಿದರು.

    ಪ್ರಭಾಚಂದ್ರ ಮಯ್ಯ ದಂಪತಿಗಳು ಹಾಗೂ ಅವರ ಕುಟುಂಬದವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಅಭಿವಂದನೆಗಳು.

    • ಪಿ.ವಿ. ಶೆಣೈ, ಸಂಗೀತ ಪರಿಷತ್ ಸದಸ್ಯರು

    Share. Facebook Twitter Pinterest LinkedIn Tumblr WhatsApp Email
    Previous Article“ಯತೀಮ್” ಕಾದಂಬರಿ ಬಿಡುಗಡೆ
    Next Article ಕಾಸರಗೋಡಿನ ಗಡಿನಾಡು ಪ್ರದೇಶ ಲೇಖಕಿಯರ ಸಮಾವೇಶ
    roovari

    Add Comment Cancel Reply


    Related Posts

    ಸಂಗೀತ ವಿಮರ್ಶೆ | ಶ್ರೋತೃಗಳನ್ನು ರಂಜಿಸಿದ ಪ್ರಜ್ಞಾ ಅಡಿಗ

    February 16, 2026

    ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳ ಖ್ಯಾತ ತಂಡಗಳಿಂದ ‘ಶಿವಗಾನಾಮೃತ’ ಭಜನೆ ಸೇವೆ ಸುಸಂಪನ್ನ

    February 16, 2026

    ಡಾ. ನಿತ್ಯಾನಂದ ಬಿ. ಶೆಟ್ಟಿ ಇವರ ‘ಅಳವು ಅರಿಯದ ಭಾಷೆ’ ಪುಸ್ತಕ ಲೋಕಾರ್ಪಣೆ

    February 16, 2026

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ ಕೂಟ

    February 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.