ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಆಕೃತಿ ಆಶಯ ಪಬ್ಲಿಕೇಶನ್ಸ್ ಕುಡ್ಲ ಇವರ ಸಹಯೋಗದಲ್ಲಿ ಡಾ. ವಾಮನ ನಂದಾವರ ಇವರ ನೆನೆಪಿನಲ್ಲಿ ‘ವಾಮನ ನಂದಾವರ ಚಾವಡಿ’ ಹೆಸರಿನ ಫಲಕ ಅನಾವರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 14 ಮಾರ್ಚ್ 2026ರಂದು ಮಧ್ಯಾಹ್ನ ಗಂಟೆ 2-30ಕ್ಕೆ ಮಂಗಳೂರು ಉರ್ವಸ್ಟೋರಿನ ತುಳು ಭವನದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ವಹಿಸಲಿದ್ದು, ‘ಆದಿಮ’ ಮತ್ತು ‘ತಾಳಮೇಳ’ ಕೃತಿಗಳನ್ನು ಅನಾವರಣಗೊಳಿಸಲಿದ್ದಾರೆ. ಉಚ್ಚಿಲ ಕಲಾಗಂಗೋತ್ರಿ ನಿರ್ದೇಶಕರಾದ ಕೆ. ಸದಾಶಿವ ಇವರು ‘ವಾಮನ ನಂದಾವರ ಚಾವಡಿ’ ಹೆಸರಿನ ಫಲಕ ಅನಾವರಣಗೊಳಿಸಲಿದ್ದು, ಡಾ. ಚಲಪತಿ ಮೈಸೂರು ಇವರು ‘ಆದಿಮ’ ಮತ್ತು ಜ್ಯೋತಿ ಮಹಾದೇವ ಇವರು ‘ತಾಳಮೇಳ’ ಕೃತಿಯ ಪರಿಚಯ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ರತ್ನಾವತಿ ಜೆ. ಬೈಕಾಡಿ ಮತ್ತು ಬಳಗ ಹಾಗೂ ಜಯಲಕ್ಷ್ಮೀ ಶಾಸ್ತ್ರಿ ಇವರಿಂದ ‘ಪದರಂಗಿತ’ ಪ್ರಸ್ತುತವಿದೆ.

