ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಆಶ್ರಯದಲ್ಲಿ ವಿದ್ವಾನ್ ಪಡುಬಿದ್ರಿ ಸುಬ್ರಾಯ ಮಾಣಿ ಭಗವತರ ಸಂಸ್ಮರಣಾ ಸಂಗೀತ ಕಛೇರಿ ಹಾಗೂ ಭರತನಾಟ್ಯ ಕಾರ್ಯಕ್ರಮವು ದಿನಾಂಕ 24 ಮೇ 2026ರಂದು ಸಂಜೆ 5-00 ಗಂಟೆಗೆ ಸುರತ್ಕಲ್‌ನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವು ಪಡುಬಿದ್ರಿ ಸುಬ್ರಾಯ ಮಾಣಿ ಭಾಗವತರ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ನಡೆಯಲಿದ್ದು, ಮೊದಲಿಗೆ ಪಿ. ನಿತ್ಯಾನಂದ ರಾವ್ ಇವರಿಂದ ನಾಮ ಸಂಕೀರ್ತನ, ದೇವರನಾಮ ಹಾಗೂ ಯಕ್ಷಗಾನ ಹಾಡುಗಾರಿಕೆ ಕಛೇರಿ ನಡೆಯಲಿದೆ. ಇವರಿಗೆ ಸಹ ಗಾಯನದಲ್ಲಿ ಚಿನ್ಮಯ ಕೃಷ್ಣ, ಅಭಿಷೇಕ್, ವಿದ್ವತ್ ರಾವ್, ವಯಲಿನ್‌ನಲ್ಲಿ ಸುಪ್ರೀತಾ ಪಿ.ಎಸ್., ಮೃದಂಗದಲ್ಲಿ ಸಂದೀಪ್ ರಾಮಮೂರ್ತಿ, ಮದ್ದಳೆಯಲ್ಲಿ ಅಚಿಂತ್ಯ ಕೃಷ್ಣ ಮತ್ತು ತಂಬೂರದಲ್ಲಿ ಸುಜಾತಾ ಎಸ್. ಭಟ್ ಸಹಕರಿಸಲಿದ್ದಾರೆ. ಬಳಿಕ ವಿದುಷಿ ವಿದ್ಯಾ ಮನೋಜ್ ಇವರ ಶಿಷ್ಯೆ ಪ್ರಣಮ್ಯ ಇವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದು ಶ್ರೀವಿಭು ರಾವ್ ತಿಳಿಸಿದ್ದಾರೆ.

