Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ನಾ. ಮೊಗಸಾಲೆಯವರ ‘ಭೂಮಿಗೀತ’ ಕಾದಂಬರಿ

    October 14, 2026

    ಉದ್ಘಾಟನೆಗೊಂಡ ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರ

    October 14, 2026

    ‘ವಿಶ್ವ ಸಾಹಿತ್ಯ ಪುರಸ್ಕಾರ’ಕ್ಕೆ ಮೂವರು ಹಿರಿಯ ಸಾಹಿತಿಗಳು ಆಯ್ಕೆ

    October 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ಸ್ಮೃತಿ ಸರಣಿ ಕಾರ್ಯಕ್ರಮ
    Literature

    ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ಸ್ಮೃತಿ ಸರಣಿ ಕಾರ್ಯಕ್ರಮ

    October 14, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಹಾಗೂ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿಯ ಸಹಯೋಗದೊಂದಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ದಿನಾಂಕ 13 ಅಕ್ಟೋಬರ್ 2026ರಂದು ‘ವಿವೇಕ ಸ್ಮೃತಿ’ ಸರಣಿ ಉಪನ್ಯಾಸ ಕಾರ್ಯಕ್ರಮವು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಾಗ್ಮಿ ಹಾಗೂ ಕಲ್ಮಾಡಿಯ ಆಸೆಮ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಪವನ್‌ಕಿರಣಕೆರೆ “ದೇವರ ಕುರಿತಾಗಿ ಪ್ರಶ್ನಿಸುವ ಮೂಲಕ ಜೀವನದ ಸಾರವನ್ನು ಅರ್ಥೈಸಿಕೊಂಡವರು ಸ್ವಾಮಿ ವಿವೇಕಾನಂದರು. ಅವರು ತಮ್ಮ ಗುರು ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಿಂದ ದೈವಿಕ ಅನುಭವವನ್ನು ಪಡೆದು ಪರಮಜ್ಞಾನವನ್ನು ಸಿದ್ಧಿಸಿಕೊಂಡು ಜಗತ್ತಿಗೆ ಪ್ರೇರಣೆಯಾದವರು. ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ದಕ್ಷಿಣೇಶ್ವರದ ಕಾಳಿಕಾ ಮಾತೆಯ ದರ್ಶನ ತಂದ ಜ್ಞಾನ ಮತ್ತು ವೈರಾಗ್ಯದ ದಾರಿ ಅವರ ಜೀವನವನ್ನು ರೂಪಿಸಿತು. ಅಂತೆಯೇ ನಾವು ನಮ್ಮ ಸಂಸ್ಕೃತಿಯ ಬಗ್ಗೆ ಧೃಢವಾದ ನಂಬಿಕೆಯಿಟ್ಟಾಗ ಅದುವೇ ನಮಗೆ ಶಕ್ತಿಯಾಗಬಲ್ಲದು. ಶಕ್ತಿ ಎಂದರೆ ಚೈತನ್ಯಶೀಲವಾದುದು ಹಾಗೂ ಇದೇ ಶಕ್ತಿಯಿಂದ ಸ್ಫೂರ್ತಿ ಪಡೆದ ಸ್ವಾಮಿ ವಿವೇಕಾನಂದರು ಭಾರತೀಯ ತತ್ವಗಳನ್ನು ಜಗತ್ತಿಗೆ ಸಾರಿದವರು. ವಿವೇಕ ಎನ್ನುವ ಪದದಲ್ಲೇ ಜೀವನದಲ್ಲಿ ಯಾವುದು ನಿಜಾರ್ಥದ ಸುಖ ಎಂಬುದರಿಂದ ತೊಡಗಿ ಎಲ್ಲವೂ ಅಡಕವಾಗಿದೆ ಹಾಗೂ ಅಂತಹಾ ವಿವೇಕದಿಂದ ಆನಂದ ಲಭಿಸುತ್ತದೆ. ನಾವು ನಮ್ಮ ಜೀವನದಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಸಂಸ್ಕೃತಿಯ ಮೇಲೆ ಧೃಢ ನಂಬಿಕೆಯಿಟ್ಟಾಗ ಆಗುವ ಪರಿಣಾಮಗಳನ್ನು ಕಂಡುಕೊಳ್ಳುತ್ತಾ ಸಾಗಬೇಕು” ಎಂದು ನುಡಿದರು.

    ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ವಿವೇಕಾನಂದ ಪದವಿಪೂರ್ವಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. “ಭಾರತ ದೇಶವೆಂದರೆ ತಾಯ್ತನದ ಪ್ರತೀಕವಾಗಿದೆ. ಸ್ವಾಮಿ ವಿವೇಕಾನಂದರು ಭಾರತದ ಕೀರ್ತಿಯನ್ನು ಜಗತ್ತಿಗೆ ಪಸರಿಸಿ ಭಾರತೀಯರನ್ನು ಜಾಗೃತರನ್ನಾಗಿಸಿದವರು. ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಭಾರತವನ್ನು ತಾಯಿ ಎಂಬಂತೆ ಕಂಡ ವಿವೇಕಾನಂದರಂತಹಾ ಅನೇಕರು ಕಾರಣ. ಇದು ಅನೇಕ ರಾಜ್ಯಗಳನ್ನೊಳಗೊಂಡ ಭೂಪ್ರದೇಶವಷ್ಟೇ ಅಲ್ಲ ಬದಲಾಗಿ ಮೌಲ್ಯಯುತ ಸಂಸ್ಕೃತಿ ಇರುವ ನಾಡು ಎನಿಸಿದೆ. ನಮ್ಮ ವೈಯುಕ್ತಿಕ ವಿಚಾರಧಾರೆಗಳು ಭಿನ್ನವಾದರೂ ಕೂಡಾ ಭಾರತೀಯರಾಗಿ ನಾವು ದೇಶಾಭಿಮಾನವನ್ನು ಮೈಗೂಡಿಸಿಕೊಂಡು ಒಂದಾಗಬೇಕು” ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಹಾಗು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿ ಚರಣ್‌ ರೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಬಿ. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್. ವಂದಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಾವತಿ ಬಿ. ನಿರ್ವಹಿಸಿದರು.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಸುಚಿತ್ರಾ ಸಭಾಂಗಣದಲ್ಲಿ ಪುಸ್ತಕಗಳ ಬಿಡುಗಡೆ ಸಮಾರಂಭ
    Next Article ‘ರಜತ ಪರ್ವ’ ಮುಂಬಯಿ ಯಕ್ಷಗಾನ ಸಮ್ಮೇಳನದ ಸಮಾರೋಪ ಸಮಾರಂಭ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ನಾ. ಮೊಗಸಾಲೆಯವರ ‘ಭೂಮಿಗೀತ’ ಕಾದಂಬರಿ

    October 14, 2026

    ಉದ್ಘಾಟನೆಗೊಂಡ ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರ

    October 14, 2026

    ‘ವಿಶ್ವ ಸಾಹಿತ್ಯ ಪುರಸ್ಕಾರ’ಕ್ಕೆ ಮೂವರು ಹಿರಿಯ ಸಾಹಿತಿಗಳು ಆಯ್ಕೆ

    October 14, 2026

    ಮಾಣಿಕ್ಯ ಪ್ರಕಾಶನದ ಹನ್ನೊಂದನೇ ವಾರ್ಷಿಕೋತ್ಸವ ‘ಮಾಣಿಕ್ಯ ಸಂಭ್ರಮ 2026’

    October 14, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.