ಗೋವಾ : ಚೇತನ ಪ್ರತಿಷ್ಠಾನ ಧಾರವಾಡ ಇದರ ವತಿಯಿಂದ ಕರ್ನಾಟಕದ ಯಶಸ್ವಿ ಸಂಘಟಕ, ಸಾಹಿತಿ ಪತ್ರಕರ್ತ ಡಾ. ಚಂದ್ರಶೇಖರ ಮಾಡಲಗೇರಿ ಸಾರಥ್ಯದಲ್ಲಿ ‘ವಿಶ್ವ ಕನ್ನಡ ಸಮ್ಮೇಳನ’ ಗೋವಾ 2026 ಕಾರ್ಯಕ್ರಮವನ್ನು ದಿನಾಂಕ 24 ಮೇ 2026ರಂದು ಬೆಳಗ್ಗೆ 8-30 ಗಂಟೆಗೆ ಗೋವಾ ಪಣಜಿ ಮೀರಾ ಮಾರ್ ಬೀಚ್ ಎದುರು ಗಾಸಫರ್ ಡೈಸ್ ಟೆನಿಸ್ ಕೋರ್ಟ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಸಿದ್ಧ ಚಿತ್ರ ಸಾಹಿತಿ ನಟ ಮತ್ತು ನಿರ್ದೇಶಕರಾದ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.
ಪ್ರಸಿದ್ಧ ಲೇಖಕರಾದ ಡಾ. ರಾಜಶೇಖರ ಮಠಪತಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಕಲಾವಿದೆ ಶ್ರೀಮತಿ ಉಷಾಲತಾ ಶೆಟ್ಟಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಡಲ ಕಿನಾರೆಯಲ್ಲಿ ಕಾವ್ಯ ವಾಚನ, ನೃತ್ಯ, ಗೀತ ಗಾಯನ, ಕೃತಿ ಅನಾವರಣ, ವಿವಿಧ ಕ್ಷೇತ್ರದ ಸಾಧಕರಿಗೆ ‘ವಿಶ್ವ ಕನ್ನಡತಿ ಪ್ರಶಸ್ತಿ’, ‘ವಿಶ್ವ ಕನ್ನಡಿಗ ಪ್ರಶಸ್ತಿ’, ‘ಅತ್ಯುತ್ತಮ ಕನ್ನಡ ಶಾಲೆ ಪ್ರಶಸ್ತಿ’, ‘ಅತ್ಯುತ್ತಮ ಕನ್ನಡ ಸಂಘ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

