ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ‘ಯಕ್ಷಗಾನ ದಾಖಲೀಕರಣ’ ಕಾರ್ಯಕ್ರಮವನ್ನು ದಿನಾಂಕ 05 ಜುಲೈ 2026ರಂದು ಬೆಳಗ್ಗೆ 9-30 ಗಂಟೆಗೆ ಉಡುಪಿಯ ಉಡುಪಿ ಎಂ.ಜಿ.ಎಂ. ಕಾಲೇಜು ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ ಸಲಹಾ ಸಮಿತಿ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ಮಾಹೆ ಸಲಹೆಗಾರರಾದ ಡಾ. ನಾರಾಯಣ ಸಭಾಹಿತ್ ಇವರು ಉದ್ಘಾಟನೆ ಮಾಡಲಿದ್ದಾರೆ. ‘ವೀರ ವೃಷಸೇನ’ ಯಕ್ಷಗಾನ ದಾಖಲೀಕರಣದಲ್ಲಿ ಗಣೇಶ ಹೆಬ್ರಿ, ರಾಘವೇಂದ್ರ ಹೆಗಡೆ ಯಲ್ಲಾಪುರ, ಶಿವಾನಂದ ಕೋಟ, ಕೋಡಿ ವಿಶ್ವನಾಥ ಗಾಣಿಗ, ದಿನೇಶ್ ಕುನ್ನಾರ್, ಗಣೇಶ್ ನಾಯ್ಕ ಮುಗ್ವ, ಪ್ರದೀಪ್ ಶೆಟ್ಟಿ ನಾರ್ಕಳಿ ಮತ್ತು ಡಾ. ಶಿವಕುಮಾರ್ ಅಳಗೋಡು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

