ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ “ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು” ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 121ನೇ ತಿಂಗಳ ಕಾರ್ಯಕ್ರಮವು ದಿನಾಂಕ 26 ಜುಲೈ 2026ರಂದು ಗೊಂಬೆ ಮನೆಯಲ್ಲಿ ಜರುಗಿತು.
ದೇವಕಿ ಸುರೇಶ್ ಪ್ರಭು ಪ್ರಾರ್ಥಿಸಿದರು. ನಿವೃತ್ತ ಅಧ್ಯಾಪಕ ಸುಬ್ರಾಯ ಮಯ್ಯ, ಪ್ರಸಂಗಕರ್ತ ಡಾ. ಶಿವಕುಮಾರ ಅಳಗೋಡು, ಶಿಕ್ಷಕಿ ಹಾಗೂ ಯಕ್ಷಗಾನ ಕಲಾವಿದೆ ಶ್ರೀಮತಿ ನಾಗರತ್ನ ಹೇರ್ಳೆ ಗಿಳಿಯಾರು, ಉಪ್ಪಿನಕುದ್ರು ಗೊಂಬೆಯಾಟದ ಅರ್ಥಧಾರಿ ರಾಮ ಬಳೆಗಾರ್ ಹೆರೂರು, ತಲ್ಲೂರು ನಾರಾಯಣ ವಿಕಲ ಚೇತನ ಶಾಲೆಯ ಮುಖ್ಯಸ್ಥ ತಲ್ಲೂರು ಸುರೇಶ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ವತಿಯಿಂದ ನಾಗರತ್ನ ಹೇರ್ಳೆಯವರನ್ನು ಸಮ್ಮಾನಿಸಲಾಯಿತು. ಚಂದ್ರ ದೇವಡಿಗ ಉಪ್ಪಿನಕುದ್ರು ಇವರಿಗೆ ಅಕಾಡೆಮಿಯ ವತಿಯಿಂದ ವೈದ್ಯಕೀಯ ನೆರವು ನೀಡಲಾಯಿತು. ಕಾರ್ಯಕ್ರಮದ ಕೊನೆಗೆ ಉಡುಪಿಯ ಕಲಾಭಿರಾಮ ಪ್ರತಿಷ್ಠಾನ ಇದರ ಸದಸ್ಯರಿಂದ ‘ಜಾಬಾಲಿ ನಂದಿನಿ’ ಯಕ್ಷಗಾನ ತಾಳಮದ್ದಲೆ ನೆರೆದ ಪ್ರೇಕ್ಷಕರನ್ನು ರಂಜಿಸಿತು. ನಿವೃತ್ತ ಶಿಕ್ಷಕ ಉದಯ ಭಂಡಾರ್‌ಕಾರ್ ಹಟ್ಟಿಯಂಗಡಿ ಇವರು ಕಾರ್ಯಕ್ರಮ ನಿರೂಪಿಸಿದರು. ರಾಜೇಂದ್ರ ಪೈ ವಂದಿಸಿದರು.
