ವಿಜಯನಗರ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ.) ಚನ್ನರಾಯಪಟ್ಟಣ, ವಿಜಯನಗರ ಜಿಲ್ಲಾ ಘಟಕದ ಮಾಧ್ಯಮ ವಕ್ತಾರರಾಗಿ ಶಿಕ್ಷಕರು ಮತ್ತು ಸಾಹಿತಿಗಳಾದ ಡಾ. ಪ್ರಸನ್ನ ದೇವರ ಮಠ ಅನಿಲ್ ಕುಮಾರ್ ಮಾಗಳ ಇವರನ್ನು ಆಯ್ಕೆ ಮಾಡಲಾಗಿದೆ.
ಅನಿಲ್ ಕುಮಾರ್ ಇವರನ್ನು ಹೂವಿನ ಹಡಗಲಿ ತಾಲೂಕು ಘಟಕದ ಸಂಚಾಲಕರನ್ನಾಗಿ ಸಹ ಆಯ್ಕೆ ಮಾಡಿದ್ದು, ತಾಲೂಕು ಅಧ್ಯಕ್ಷರಾದ ಶ್ರೀ ಚನ್ನವೀರಸ್ವಾಮಿ ಅವರೊಡನೆ ಸೇರಿ ಮಕ್ಕಳಲ್ಲಿನ ಸಾಹಿತ್ಯ ಅಭಿರುಚಿ, ಸೃಜನಶೀಲ ಬರವಣಿಗೆ ಪರಿಸರ ಸಂರಕ್ಷಣೆ, ದೇಶಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಸೂಚಿಸಿದ್ದಾರೆ.
ಡಾ. ಅನಿಲಕುಮಾರ್ ಇವರು ಬಳ್ಳಾರಿ ಜಿಲ್ಲಾ ಘಟಕದ ಸಂಸ್ಥಾಪಕ ಮತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ನಮ್ಮ ಮಕ್ಕಳ ಸಾಹಿತ್ಯ ಪರಿಷತ್ತಿನ ಏಳಿಗೆಗೆ ಶ್ರಮಿಸಿದ್ದಾರೆ. ಇದೀಗ ವಿಜಯನಗರ ಜಿಲ್ಲಾ ಘಟಕದಲ್ಲಿ ಮಾಧ್ಯಮ ವಕ್ತಾರರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆ ಸದಾ ಮಿಡಿಯುತ್ತಿರುವ ಮಕ್ಕಳ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಗಾಗಿ ಪ್ರಯತ್ನಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಬಡಿಗೇರ್ ತಿಳಿಸಿದ್ದಾರೆ.
