Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದ ರಂಗಾಯಣ ಸಭಾ ಭವನದಲ್ಲಿ ‘ಜಾನಪದ ನೃತ್ಯ ಕಲಾಮೇಳ’ | ಮೇ 16

    May 15, 2026

    ಸಂಗೀತ ಪರಿಷತ್ ವತಿಯಿಂದ ಅಮೃತ ಭವನದಲ್ಲಿ ಸಂಗೀತ ಕಛೇರಿ | ಮೇ 17

    May 15, 2026

    ಉದ್ಘಾಟನೆಗೊಂಡ ‘ಬಾಲ ಲೀಲಾ -2026’ ಚಿಣ್ಣರ ಬೇಸಿಗೆ ಶಿಬಿರ

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’
    Book Release

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ವಲ್ಲಿ ವಗ್ಗ, ಮೈಸೂರು ಕಾವ್ಯನಾಮದಿಂದ ಖ್ಯಾತರಾಗಿರುವ, ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ, ಮೂಲತಃ ನಿರ್ಕಾಣ್ – ವಗ್ಗದ ವಲೇರಿಯನ್ ಡಿ’ಸೊಜಾ ಇವರ ‘ವಿಂಚ್ಣಾರ್ ಕಾಣಿಯೊ’ (ಆಯ್ದ ಕತೆಗಳು) ಕಥಾ ಸಂಗ್ರಹವನ್ನು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಹೋದಯ ಸಭಾಂಗಣದಲ್ಲಿ ದಿನಾಂಕ 10 ಮೇ 2026ರಂದು ಲೋಕಾರ್ಪಣೆಗೊಂಡಿತು.

    ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ, ಹೊಸ ದೆಹಲಿಯ ಕಾರ್ಯಕಾರಿ ಸಮಿತಿಯ ಸದಸ್ಯರೂ, ಕೊಂಕಣಿ ಭಾಷಾ ಸಲಹಾ ಸಮಿತಿಯ ಸಂಚಾಲಕರೂ ಆಗಿರುವ ಕವಿ ಮೆಲ್ವಿನ್ ರೊಡ್ರಿಗಸ್ “ನಾನು ಕೊಂಕಣಿಯಲ್ಲಿ ಬರೆಯಲು ಆರಂಭಿಸುವಾಗಲೂ ವಲ್ಲಿ ವಗ್ಗ ಬರೆಯುತ್ತಿದ್ದರು, ಈಗಲೂ ಸಾತತ್ಯದಿಂದ ಬರೆಯುತ್ತಿದ್ದಾರೆ. ಕಿರಿಯರಾದ ನಮಗೆ ವಲ್ಲಿ ವಗ್ಗ ದೊಡ್ಡಣ್ಣನಂತೆ ಮಾತ್ರವಲ್ಲ, ಅಭಿಪ್ರಾಯ ಭೇದಗಳಿರುವ ಕೊಂಕಣಿ ಲೇಖಕರನ್ನು ಒಗ್ಗೂಡಿಸಿ, ಸಂಬಂಧಗಳನ್ನು ದಾರದಲ್ಲಿ ಪೋಣಿಸುವ ದರ್ಜಿಯಂತೆ. ಕೊಂಕಣಿ ಸಾಹಿತ್ಯ ಮತ್ತು ಸಂಘಟನೆಗೆ ಅವರ ಸೇವೆ ಸ್ತುತರ್ಹ್ಯ. ಆರು ದಶಕಗಳಿಂದ ಸತತವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಅವರ ಸಾಹಿತ್ಯವನ್ನು ಸಂಭ್ರಮಿಸುವುದೇ ಅವರಿಗೆ ನಾವು ಸಲ್ಲಿಸಬಹುದಾದ ಶ್ರೇಷ್ಠ ಗೌರವ. ಕಥಾ ಸಾಹಿತ್ಯದಲ್ಲಿ ನಿಖರತೆ, ಔದಾರ್ಯ ಮತ್ತು ಸಂಕ್ಷಿಪ್ತತೆ ಬಹಳ ಮುಖ್ಯವಾದ ಗುಣಗಳು. ವಲ್ಲಿ ವಗ್ಗ ಅವರ ಕತೆಗಳಲ್ಲಿ ಇವು ಡಾಳಾಗಿ ಕಾಣಸಿಗುತ್ತವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ‘ವಿಂಚ್ಣಾರ್ ಕಾಣಿಯೊ’ ಕೃತಿಯನ್ನು ಪರಿಚಯಿಸಿದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಚ್.ಎಮ್. ಪೆರ್ನಾಲ್ ಇವರು “1964ರಲ್ಲಿ ಬರವಣಿಗೆ ಆರಂಭಿಸಿ, ಕನ್ನಡದಲ್ಲೂ ಸಾಕಷ್ಟು ಕತೆಗಳನ್ನು ಬರೆದಿರುವ ವಲ್ಲಿ ವಗ್ಗ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಹಿರಿಯ ಕತೆಗಾರರಾಗಿದ್ದು, ಸಮಾಜದಲ್ಲಿ ದುರ್ಲಕ್ಷ್ಯಕ್ಕೊಳಗಾದ ಧಮನಿತ ವರ್ಗದ ಪರವಾಗಿ ನಿಲ್ಲುವುದು ಮತ್ತು ಜೀವಪರತೆಯನ್ನು ಸಾರುವುದೇ ಅವರ ಕತೆಗಳ ಪ್ರಮುಖ ಗುಣ. 1996 – 2026 ಹೀಗೆ ಮೂರು ದಶಕಗಳ ಅಂತರದಲ್ಲಿ ಬರೆದ ತಲಾ ಒಂದೊಂದು ಕತೆಯನ್ನು ದಾಖಲೆಯಾಗಿ ತೆಗೆದುಕೊಂದು ಅವರ ಕತೆಗಳು ಕಾಲಾತೀತ ಮೌಲ್ಯಗಳನ್ನು ಸಾರುವಲ್ಲಿ ಯಶಸ್ವಿಯಾಗಿವೆ” ಎಂದು ಅಭಿಪ್ರಾಯಪಟ್ಟರು.

    ಶ್ರೀಮತಿ ಲಿಬೇರಾ ಡಿ’ಸೊಜಾ ಸ್ವಾಗತಿಸಿ, ವಲ್ಲಿ ವಗ್ಗ ವಂದಿಸಿದರು. ಪುತ್ರ ಲೊಯ್ ಡಿ’ಸೊಜಾ ಈ ಸಂದರ್ಭದಲ್ಲಿ ಹಾಜರಿದ್ದರು. ಕವಿ ಟೈಟಸ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’
    Next Article ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ
    roovari

    Add Comment Cancel Reply


    Related Posts

    ಧಾರವಾಡದ ರಂಗಾಯಣ ಸಭಾ ಭವನದಲ್ಲಿ ‘ಜಾನಪದ ನೃತ್ಯ ಕಲಾಮೇಳ’ | ಮೇ 16

    May 15, 2026

    ಸಂಗೀತ ಪರಿಷತ್ ವತಿಯಿಂದ ಅಮೃತ ಭವನದಲ್ಲಿ ಸಂಗೀತ ಕಛೇರಿ | ಮೇ 17

    May 15, 2026

    ಉದ್ಘಾಟನೆಗೊಂಡ ‘ಬಾಲ ಲೀಲಾ -2026’ ಚಿಣ್ಣರ ಬೇಸಿಗೆ ಶಿಬಿರ

    May 15, 2026

    ‘ಮುಖವರ್ಣಿಕೆ – ವೇಷಭೂಷಣ ಶಿಬಿರ’ದ ಸಮಾರೋಪ ಸಮಾರಂಭ

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.