Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ

    April 30, 2026

    ಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’

    April 30, 2026

    ಯಕ್ಷಗಾನ ಕಲಾವಿದ ಮಳಲಿ ಶೀನಯ್ಯ ನಿಧನ

    April 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕನ್ನಡ ಗ್ರಾಮದಲ್ಲಿ ಚುಟುಕು ಸಾಹಿತ್ಯೋತ್ಸವ ಮತ್ತು ಚುಟುಕು ಗೋಷ್ಠಿಗಳು
    Cultural

    ಕನ್ನಡ ಗ್ರಾಮದಲ್ಲಿ ಚುಟುಕು ಸಾಹಿತ್ಯೋತ್ಸವ ಮತ್ತು ಚುಟುಕು ಗೋಷ್ಠಿಗಳು

    April 6, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಇವರ ವತಿಯಿಂದ ಕಾಸರಗೋಡು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರಾಮ ಕಾಸರಗೋಡು ನೇತೃತ್ವ ಕನ್ನಡ ಗ್ರಾಮದಲ್ಲಿ ದಿನಾಂಕ 28 ಮಾರ್ಚ್ 2026ರಂದು ಚುಟುಕು ಸಾಹಿತ್ಯೋತ್ಸವ ಮತ್ತು ಚುಟುಕು ಗೋಷ್ಠಿಗಳು ನಡೆದವು.

    ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು “ಸಾಹಿತ್ಯ ಪ್ರಕಾರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಓದುಗರು ಅತೀ ಹೆಚ್ಚು ಇಷ್ಟಪಡುವ ಪ್ರಕಾರವೆಂದರೆ ಅದು ಚುಟುಕು ಅಥವಾ ಹನಿಗವನವಾಗಿದೆ. ಕಳೆದ ನಲುವತ್ತು ವರ್ಷಗಳಿಂದ ಚುಟುಕು ಸಾಹಿತ್ಯ ಪರಿಷತ್ತು ಚುಟುಕು ಕವಿಗಳನ್ನು ಬೆಳೆಸುವಲ್ಲಿ ಬಹಳಷ್ಟು ಶ್ರಮವಹಿಸಿದೆ. ನಮ್ಮ ಜೀವನದಲ್ಲಿ ಚುಟುಕುಗಳಿಗೆ ಮಹತ್ವ ತುಂಬಾ ಇದೆ. ಏಕೆಂದರೆ ಚುಟುಕುಗಳು ನಮ್ಮ ಚಿಂತನೆಗೆ ಹೊಸ ದಾರಿ ತೋರಿಸುತ್ತವೆ. ಕೆಲವೊಮ್ಮೆ ನಗಿಸುವುದರ ಮೂಲಕ, ಕೆಲವೊಮ್ಮೆ ಗಂಭೀರವಾಗಿ ಆಲೋಚಿಸುವಂತೆ ಮಾಡುವುದರ ಮೂಲಕ ಜೀವನ ಪಾಠಗಳನ್ನು ನೀಡುತ್ತವೆ” ಎಂದು ಹೇಳಿದರು.

    ಕಾರ್ಯಕ್ರಮಕ್ಕೆ ಧಾರ್ಮಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ದೀಪ ಬೇಳಗಿಸಿ ಚಾಲನೆ ನೀಡಿದರು. ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ದಿಕ್ಸೂಚಿ ಭಾಷಣ ಮಾಡಿದರು. ಖ್ಯಾತ ವ್ಯಂಗ್ಯಚಿತ್ರಕಾರ ವೆಂಕಟ ಭಟ್ ಎಡನೀರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಗಡಿನಾಡು ಸಾಹಿತ್ಯ ಪರಿಷತ್ತು ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಸಂಕೀರ್ತನೆಕಾರ ಜಯಾನಂದ ಕುಮಾರ್ ಹೊಸದುರ್ಗ, ಧಾರವಾಡದ ಸಂಜೀವ ತುಮಕನಾಳ, ದಿವ್ಯಾ ಗಟ್ಟಿ, ಡಾ. ವಾಣಿಶ್ರೀ ಕಾಸರಗೋಡು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ ನಡೆಯಿತು. ಗಣ್ಯರಾದ ಪರಿಮಳಾ ರಾವ್ ಕೆ., ಸಂಜೀವ ದಮಕನಾಳ, ಜಯಾನಂದ ಕುಮಾರ್ ಹೊಸದುರ್ಗ, ಜಗದೀಶ್ ಕೂಡ್ಲು ಭಾಗವಹಿಸಿದ್ದರು. ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಕವಿಗಳಿಗೆ ಗೌರವ ಪತ್ರ ನೀಡಿ ಅಭಿನಂದಿಸಿದರು.

    baikady Cultural kannada Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾಳಮದ್ದಳೆ ಕೂಟ
    Next Article ಪುಸ್ತಕ ಬಹುಮಾನಕ್ಕೆ ಕೃತಿ ಆಹ್ವಾನ | ಕೊನೆಯ ದಿನಾಂಕ 30 ಜೂನ್
    roovari

    Add Comment Cancel Reply


    Related Posts

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ

    April 30, 2026

    ಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’

    April 30, 2026

    ಯಕ್ಷಗಾನ ಕಲಾವಿದ ಮಳಲಿ ಶೀನಯ್ಯ ನಿಧನ

    April 29, 2026

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಕಾಜಾಣ ನಾಟಕೋತ್ಸವ’ 2026 | ಏಪ್ರಿಲ್ 30

    April 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.