ಮಂಡ್ಯ : ನೆಲದನಿ ಬಳಗ (ರಿ.) ಮಂಗಲ ಆಯೋಜಿಸುವ 21ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಸಣ್ಣ ಕಥೆಗಳ ಆಧಾರಿತ ‘ಮಾಯಾಮೃಗ’ ನಾಟಕ ಪ್ರದರ್ಶನವನ್ನು ದಿನಾಂಕ 05 ನವೆಂಬರ್ 2026ರಂದು ಸಂಜೆ ಗಂಟೆ 6-15ಕ್ಕೆ ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪೃಥ್ವಿ ಆರಾಧ್ಯ ಇವರು ರಂಗರೂಪ ಮತ್ತು ನಿರ್ದೇಶನ ಮಾಡಿದ್ದು, ಹೆಚ್ಚಿನ ಮಾಹಿತಿಗೆ 9620174111, 9740255946 ಮತ್ತು 9916562373 ಸಂಖ್ಯೆ ಗಳನ್ನು ಸಂಪರ್ಕಿಸಿರಿ.

