ಬ್ರಹ್ಮಾವರ : ಸುರಭಿ (ರಿ.) ಬೈಂದೂರು ಸಾಂಸ್ಕೃತಿಕ ಸಾಹಿತ್ಯ ಸೇವಾ ಪ್ರತಿಷ್ಠಾನ ಮತ್ತು ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಕಲ್ಯಾಣ ಮತ್ತು ಸಾಮಾಜಿಕ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ ‘ನೃತ್ಯ-ನಾದ ವೈಭವ’ ಕಾರ್ಯಕ್ರಮವನ್ನು ದಿನಾಂಕ 28 ಏಪ್ರಿಲ್ 2026ರಂದು ಬೆಳಿಗ್ಗೆ 11-00 ಗಂಟೆಗೆ ಬ್ರಹ್ಮಾವರದ ಆಶ್ರಯ ಅಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಸುರಭಿ ಬೈಂದೂರು ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ ಮತ್ತು ನಾದ ವೈಭವ ಪ್ರಸ್ತುತಗೊಳ್ಳಲಿದೆ.

