ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ‘ಭಕ್ತಸುಧನ್ವ’ ಪ್ರಸಂಗದೊಂದಿಗೆ ದಿನಾಂಕ 06 ಜುಲೈ 2026ರಂದು ನಡೆಯಿತು.
ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಆನಂದ ಸವಣೂರು, ನಿತೀಶ್ ಎಂಕಣ್ಣಮೂಲೆ, ಮುರಳಿಧರ ಕಲ್ಲೂರಾಯ, ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಕಡಂಬಳಿಕೆ, ಅನೀಷ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ಭಾಸ್ಕರ್ ಬಾರ್ಯ ಮತ್ತು ಸಾವಿತ್ರಿ ಶಾಸ್ತ್ರಿ ಶಿರಂಕಲ್ಲು), ಸುಧನ್ವ (ಗುಂಡ್ಯಡ್ಕ ಈಶ್ವರ ಭಟ್), ಅರ್ಜುನ (ಗುಡಪ್ಪ ಬಲ್ಯ), ಪ್ರಭಾವತಿ (ಮನೋರಮ ಜಿ. ಭಟ್) ಸಹಕರಿಸಿದರು. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಸ್ವಾಗತಿಸಿ, ವಂದಿಸಿದರು. ಹರ್ಷ ಪುಣಚ, ಸತ್ಯನಾರಾಯಣ ಕಡಂಬಳಿಕೆ, ಟಿ. ರಂಗನಾಥರಾವ್, ಪದ್ಮನಾಭ ಸಹಕರಿಸಿದರು.

