ಪುತ್ತೂರು : ಕಲಾದೀಪ ದಂಪತಿಗಳ ಸಂಪೂರ್ಣ ರಾಮಾಯಣ ನೃತ್ಯ ಸಪ್ತಾಹದ ಏಳನೆಯ ಹಾಗೂ ಕೊನೆಯ ದಿನದ ಕಾರ್ಯಕ್ರಮ ಪುತ್ತೂರಿನ ಮುಕ್ರಂಪಾಡಿ ಆನಂದಾಶ್ರಮದಲ್ಲಿ ದಿನಾಂಕ 01 ಏಪ್ರಿಲ್ 2026ರಂದು ನಡೆಯಿತು.

ಆನಂದಾಶ್ರಮ ಟ್ರಸ್ಟಿನ ಅಧ್ಯಕ್ಷರಾದ ಡಾ. ಗೌರಿ ಪೈ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಶ್ರಮದ ಮೇಲ್ವಿಚಾರಕರಾದ ಶ್ರೀ ಸದಾಶಿವ ಪೈಯವರು ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಇವರಿಂದ ಒಂದು ಗಂಟೆಯ ಕಾಲ ನಡೆದ ರಾಮಾಯಣ ನೃತ್ಯರೂಪಕವನ್ನು ಆಶ್ರಮದ ಎಲ್ಲ ಹಿರಿಯ ನಾಗರಿಕರು ಆಸಕ್ತಿಯಿಂದ ವೀಕ್ಷಿಸಿದರು.


